• December 9, 2024

ಬೆಳ್ತಂಗಡಿ: ಎಸ್ ಡಿಪಿಐ ವತಿಯಿಂದ ಪತ್ರಿಕಾಗೋಷ್ಠಿ

 ಬೆಳ್ತಂಗಡಿ: ಎಸ್ ಡಿಪಿಐ ವತಿಯಿಂದ ಪತ್ರಿಕಾಗೋಷ್ಠಿ

 

ಬೆಳ್ತಂಗಡಿ : ತಾಲೂಕಿನಲ್ಲಿ ಎಸ್ ಡಿ ಪಿ ಐ ಪಕ್ಷಕ್ಕೆ ವ್ಯಾಪಕವಾದ ಜನಬೆಂಬಲವಿದೆ. ಇದಕ್ಕೆ ವಿರೋಧ ಪಕ್ಷದ ಕೈವಾಡವೂ ಇದೆ. ಬಿಜೆಪಿಯನ್ನು ಸೋಲಿಸುವಂತಹ ಪಕ್ಷ ಇದೆ ಎಂದರೆ ಅದು ಎಸ್ ಡಿಪಿಐ ಮಾತ್ರ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಹೇಳಿದರು.

ಅವರು ಏ.25 ರಂದು ಬೆಳ್ತಂಗಡಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿಯ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವಿರೋಧ ಪಕ್ಷದವರು ಎಸ್ ಡಿ ಪಿ ಐ ಅಭ್ಯರ್ಥಿಯ ಬಗ್ಗೆ ಜನತೆಯಲ್ಲಿ ಗೊಂದಲ ಮಾಡಿ ಅಭ್ಯರ್ಥಿ ನಾಮ ಪತ್ರ ವಾಪಾಸ್ ಪಡೆಯುತ್ತಾರೆ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ.ಆದರೆ ನಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ ನಮ್ಮ ನಾಮಪತ್ರದ ಸಂದರ್ಭದಲ್ಲಿ ಎರಡು ರಾಷ್ಟ್ರೀಯ ಪಕ್ಷದಲ್ಲಿ ಕಾಣದ ದೀರ್ಘ ಮಟ್ಟ ಮಹಿಳೆಯರು ನಮ್ಮಲ್ಲಿ ಕಂಡೆವು, ಜನರು ಬೆಸುತ್ತಾ ಹೋಗಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ತನ್ನ ಪ್ರಭಾಲ್ಯವನ್ನು ಕಾಲೆಳೆದುಕೊಳ್ಳುತ್ತಿದೆ.ಬಿಜೆಪಿ ಯನ್ನು ಸೋಲಿಸುವ ಪಕ್ಷ ಅದು ಎಸ್ ಡಿ ಪಿ ಐ ಮಾತ್ರ. ಈ ಬಾರಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದು ವಿಧಾನಸಭಾವನ್ನು ಪ್ರವೇಶಿಸಿಸುತ್ತಾರೆ ಹಾಗೂ ಎಲ್ಲಾ ಸಮುದಾಯದವರು ನಮ್ಮನ್ನು ಬೆಂಬಲಿಸುತ್ತಾರೆ, ಬೆಳ್ತಂಗಡಿ ತಾಲೂಕಿನ 241 ಬೂತ್ ನಲ್ಲಿ ನಾವು ಪ್ರಚಾರ ಮಾಡುತ್ತೇವೆ.ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ಸಮಿತಿಗಳು ಅಲ್ಲದೆ ವಿವಿಧ ಪಂಚಾಯತ್ ನಲ್ಲಿ ನಮ್ಮ ಪಕ್ಷದ ಸದಸ್ಯರು ದುಡಿಯುತ್ತಿದ್ದಾರೆ. ಎಸ್ ಡಿ ಪಿ ಐ ತಾಲೂಕಿನ ಕೆಲವು ಪಂಚಾಯತ್ ನಲ್ಲಿ ಪ್ರತಿ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಸ್ ಡಿ ಪಿ ಐ ಕೇಂದ್ರ ಸರಕಾರದ ಆಡಳಿತದ ವಿರುದ್ಧ ಹೋರಾಟ ಮಾಡಿದ ಪಕ್ಷ ಕೇಂದ್ರದ ವಿರುದ್ಧ ಬೀದಿಗೆ ಇಳಿದು ಜನಸೇವೆ ಮಾಡಿದೆ. ಕೊರೋನಾ ಸಂದರ್ಭದಲ್ಲಿ ಮೃತ ಪಟ್ಟ ಎಲ್ಲಾ ಸಮಾಜದವರ ಅಂತ್ಯ ಸಂಸ್ಕಾರದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದೆ, ಪ್ರವಾಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸೇವೆ ಸಲ್ಲಿಸಿದ್ದಾರೆ. ಈ ಎಲ್ಲಾ ಸಮಾಜ ಸೇವೆಯನ್ನು ಗುರುತಿಸಿ ನಮ್ಮ ಪಕ್ಷಕ್ಕೆ ಮತ ನೀಡಿ ಜನರು ಆಶೀರ್ವಾದಿಸಲಿದ್ದಾರೆ ಎಂದರು.


ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ, ಸಂಘಟನಾ ಕಾರ್ಯದರ್ಶಿ ನಿಶಾಕ್ ಕುದ್ರಡ್ಕ, ಸದಸ್ಯ ಇನಾಸ್ ರೋಡ್ರಿಗಸ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!