ಮಚ್ಚಿನ: ಏ30-ಮೇ 3 ರವರೆಗೆ ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಎ.30 ರಿಂದ ಮೇ 3 ಮಚ್ಚಿನ ಗ್ರಾಮದ ಶ್ರೀ ಸತ್ಯಚಾವಡಿ ಮನೆ ಮಾನ್ಯ( ಕೋಟ್ಯಾನ್ ಬರಿ) ತರವಾಡು ಮನೆಯ ಗೃಹಪ್ರವೇಶ ಹಾಗೂ ಧರ್ಮಧೈವ ಶ್ರೀ ಧೂಮಾವತಿ, ಬಂಟ, ಪರಿವಾರ ದೈವಗಳ ಮತ್ತು ಸ್ಥಳ ದೇವತಾ ಸಾನಿಧ್ಯ ಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಿ ಹೆಚ್ ಚಿಪ್ಪುಕೋಟೆ ಅವರು ತಿಳಿಸಿದರು.
ಅವರು ಏ.25 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ಏ.30 ರಂದು ಸಂಜೆ 5 ಗಂಟೆಗೆ ಶಿಲ್ಪಿಗಳಿಂದ ಕುತ್ತಿಪೂಜೆ, ಮೇ1 ರಂದು ಮಡಾವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಿಂದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ದಿನಾಕರ ಪೂಜಾರಿ ಕಡ್ತಿಲ, ಅಧ್ಯಕ್ಷ ಜನಾರ್ಧನ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೋಜ ಬಂಗೇರ, ಮಾನ್ಯ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಸಮಿತಿಯ ಕೋಶಾಧಿಕಾರಿ ಪೂರ್ಣಿಮಾ ಕೋಟ್ಯಾನ್, ಆಡಳಿತ ಮಂಡಳಿ ಕಾರ್ಯದರ್ಶಿ ವಿನಯಚ್ಚಂದ್ರ ಜೆಂಕ್ಯಾರು, ಜೋರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹೇಶ್ ಜೆಂಕ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಸಾದ್ ಪೂಜಾರಿ ಕಡ್ತಿಲ, ಜೀರ್ಣೋದ್ದಾರ ಸಮಿತಿಯ ಸಂಚಾಲಕ ದಯಾನಂದ ಪೂಜಾರಿ ಕಿಲ್ಲೂರು ಉಪಸ್ಥಿತರಿದ್ದರು.