ಜಲದ ಸಮಸ್ಯೆಯನ್ನು ಪರಿಹರಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ: ಮತ್ತೆ ಮತ್ತೆ ಕಾರ್ಣಿಕವನ್ನು ತೋರುವ ತಾಯಿ
ಆರಿಕೋಡಿ: ಕಡಬ ತಾಲೂಕಿನ ಏನ್ಮೂರ್ ಗ್ರಾಮದ ಶೇಖರ್ ಕೆಪಿ ಎಂಬವರ ಜಾಗದಲ್ಲಿ ನೀರಿನ ಸಮಸ್ಯೆ ಕಂಡುಬಂದ ವೇಳೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಮೊರೆ ಹೋಗುತ್ತಾರೆ. ಭಕ್ತರ ಕಷ್ಟವನ್ನು ಆಲಿಸಿದ ದೇವಿಯು ಕಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನು ಈಡೇರಿಸಿದ ಘಟನೆ ವರದಿಯಾಗುತ್ತಲೇ ಇದೆ.
ಹೌದು ಕಡಬ ತಾಲೂಕಿನ ಏನ್ಮೂರ್ ಗ್ರಾಮದ ಶೇಖರ್ ಕೆಪಿ ಎಂಬವರ ಜಾಗದಲ್ಲಿ ನೀರಿನ ಸಮಸ್ಯೆ ಕಂಡುಬಂದಾಗ ಹಲವಾರು ದೇವಸ್ಥಾನಗಳಿಗೆ ಹರಕೆಯನ್ನು ನೀಡಿ ಎಷ್ಟೇ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯದೇ ಇದ್ದ ಸಂದರ್ಭದಲ್ಲಿ ಪವಿತ್ರ ಕ್ಷೇತ್ರ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕಾಣುತ್ತಾರೆ. ದೇವಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡುತ್ತಾರೆ.ಅಭಯದ ನುಡಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ನುಡಿಯನ್ನು ನೀಡುತ್ತಾಳೆ. ತನ್ನ ಮಾತಿನಂತೆ ಭಕ್ತನೋರ್ವನ ಜಲದ ಸಮಸ್ಯೆಯು ನಿವಾರಣೆಯಾಗುತ್ತದೆ.
ನಂಬಿ ಬಂದ ಭಕ್ತರನ್ನು ಪೊರೆಯುತ್ತಾಳೆ ಎಂಬುವುದಕ್ಕೆ ಇಂತಹ ನೂರಾರು ಸಾಕ್ಷಿಗಳೇ ನಮಗೆ ನಿದರ್ಶನ