• October 16, 2024

ಅಪಘಾತ ನಡೆದ ಪರಿಣಾಮ:ದೇಹದಲ್ಲಿ ಶಕ್ತಿಯನ್ನು ಕಳೆದುಕೊಂಡ ಸುಧಾಕರ್ ಕಟ್ಟದಬೈಲು: ಚಿಕಿತ್ಸಾ ಸಹಾಯಕ್ಕೆ ದಾನಿಗಳ ನಿರೀಕ್ಷೆಯಲ್ಲಿ

 ಅಪಘಾತ ನಡೆದ ಪರಿಣಾಮ:ದೇಹದಲ್ಲಿ ಶಕ್ತಿಯನ್ನು ಕಳೆದುಕೊಂಡ ಸುಧಾಕರ್ ಕಟ್ಟದಬೈಲು: ಚಿಕಿತ್ಸಾ ಸಹಾಯಕ್ಕೆ ದಾನಿಗಳ ನಿರೀಕ್ಷೆಯಲ್ಲಿ

 

ಧರ್ಮಸ್ಥಳ: ಸುಧಾಕರ್ ಕಟ್ಟದಬೈಲು ಎಂಬವರು ಎ.4 ರಂದು ಕೆಲಸಕ್ಕೆಂದು ಸ್ಕೂಟರಿನಲ್ಲಿ ಧರ್ಮಸ್ಥಳ ಗ್ರಾಮದ ಚರ್ಚ್ ಬಳಿ ತೆರಳುತ್ತಿದ್ದ ವೇಳೆ ಎದುರಿನಿಂದ ಟಿಪ್ಪರ್ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಸೊಂಟ, ಕೈ ಕಾಲುಗಳು ಹಾಗು ಕಿಡ್ನಿಗೆ ವಿಪರೀತ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆಗೆ ಸುಮಾರು 4 ರಿಂದ 5 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಬಹುದುದೆಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಆದರೆ ಇವರು ಬಡ ಕುಟುಂಬದಲ್ಲಿದ್ದು , ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಸಾಲಗಳಿಂದ ನೊಂದಿರುವ ಕಾರಣ ಆ ಖರ್ಚನ್ನು ಭರಿಸಲು ಇವರ ಕುಟುಂಬ ಪರದಾಡುತ್ತಿದೆ. ದಾನಿಗಳ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ.

ದಯಾಳುಗಳು ನೊಂದಿರುವ ಕುಟುಂಬಕ್ಕೆ ತಮ್ಮಿಂದಾದ ಸಹಾಯವನ್ನು ನೀಡಿ ಕುಟುಂಬದ ಕಣ್ಣೀರೊರೆಸುವ ಕೆಲಸ ಆಗಬೇಕಾಗಿದೆ.

ಸಹಕರಿಸಲು ಬಯಸುವವರು ಈ ಕೆಳಗಿನ ನಂಬರಿಗೆ ಸಂಪರ್ಕಿಸಬಹುದು.

NAME: Sudhakara

PHONE : 9740609707

Ac/ no: 02462200009577

IFSC code: CNRB0010246

Related post

Leave a Reply

Your email address will not be published. Required fields are marked *

error: Content is protected !!