ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತಂಡ ನಿರ್ವಹಣೆಯ ಬಗ್ಗೆ ತರಬೇತಿ ಕಾರ್ಯಾಗಾರ
ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತಂಡ ನಿರ್ವಹಣೆಯ ಬಗ್ಗೆ ತರಬೇತಿ ಕಾರ್ಯಾಗಾರವು ಜೆಸಿಐ ಮಂಜುಶ್ರೀ ಘಟಕದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಶಂಕರ್ ರಾವ್ ವಹಿಸಿದ್ದರು.
ಮೂಡುಬಿದಿರೆ ಜೆಸಿಐನ ತರಬೇತುದಾರರಾದ ಜೆಅಇ ಚೇತನ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್, ಜೊತೆ ಕಾರ್ಯದರ್ಶಿ ಸೃಜನ್ ಆರ್ ರೈ, ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಉಪಸ್ಥಿತರಿದ್ದರು.