• December 6, 2024

ಶ್ರೀ ಧ. ಮಂ. ಆ ಮಾ ಶಾಲೆ ಧರ್ಮಸ್ಥಳದಲ್ಲಿ ಬೇಸಿಗೆ ಶಿಬಿರ ಸಮಾಪ್ತಿ ಹಾಗೂ ಪ್ರದರ್ಶನ ಮತ್ತು ಮಾರಾಟಮೇಳ

 ಶ್ರೀ ಧ. ಮಂ. ಆ ಮಾ ಶಾಲೆ ಧರ್ಮಸ್ಥಳದಲ್ಲಿ ಬೇಸಿಗೆ ಶಿಬಿರ ಸಮಾಪ್ತಿ ಹಾಗೂ ಪ್ರದರ್ಶನ ಮತ್ತು ಮಾರಾಟಮೇಳ

 

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳದಲ್ಲಿ ಕಳೆದ ಮೂರು ದಿನಗಳಿಂದ ಸಂಭ್ರಮದ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಅಲ್ಲೇ ತಯಾರಿಸಿದಂತಹ ಹಲವಾರು ವಸ್ತುಗಳ ತಿಂಡಿಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಕಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ಇದರಿಂದ ಬಂದ ಲಾಭವನ್ನು ತುಡಿತ ಎಂಬ ಕಾರ್ಯಕ್ಕೆ ಉಪಯೋಗಿಸುವುದು ವಿಶೇಷ.ತುಡಿತ ಎಂಬುದು ಈ ಶಾಲೆಯ ಆಸಕ್ತರಿಗೆ ಸಹಾಯ ಹಸ್ತ ಚಾಚುವ ಕಾರ್ಯಕ್ರಮ.

ಹಾಸಿಗೆ ಬಿಟ್ಟು ಮೇಲೆ ಏಳಲಾಗದ ವ್ಯಕ್ತಿಗಳ ಮನೆಗೆ ತೆರಳಿ ಅವರ ಜೊತೆ ಹಾಡು ಹರಟೆ ಮಾತುಕತೆ ನಡೆಸಿ ಅವರಿಗೆ ಹಣ್ಣು ಹಂಪಲು ಹಾಗೂ ಕಿಂಚಿತ್ ಧನ ಸಹಾಯ ಮಾಡುವುದು ಈ ಕಾರ್ಯಕ್ರಮದ ಭಾಗ.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಪ್ರಸ್ತಾವಿಕ ಮಾತನಾಡಿ ಬೇಸಿಗೆ ಶಿಬಿರ ಹಾಗೂ ವ್ಯಾಪಾರ ಮತ್ತು ಪ್ರದರ್ಶನ ಮೇಳದ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಿದರು.

ತದನಂತರ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜುನಾಥೇಶ್ವರ ಕಾಲೇಜಿನ ಶ್ರೀಯುತ ಪ್ರವೀಣ್ ಮಾತನಾಡಿ ಇಂತಹ ಕಾರ್ಯಕ್ರಮದ ಭಾಗವಾಗಿ ಇರಲು ಬಹಳ ಹೆಮ್ಮೆ ಅನಿಸುತ್ತಿದೆ.ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ಇಂತಹ ಕಾರ್ಯಕ್ರಮಗಳು ನೀಡುತ್ತವೆ.ಮಕ್ಕಳು ಕ್ರಿಯಾಶೀಲರಾಗಿ ಇರಲು ಇದು ಸಹಕಾರಿ.ಅವರ ಆಸಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಗಳು ಶ್ರೀಮಂತರಾಗಿರಬೇಕು,ಖುಷಿಯಾಗಿ ಇರಬೇಕು,ಬುದ್ಧಿವಂತ ಆಗಿರಬೇಕು.ಹಣದ ಹಿಂದೆ ನಾವು ಯಾವತ್ತೂ ಹೋಗಬಾರದು.ಶ್ರದ್ಧೆಯಿಂದ ಕೆಲಸ ಮಾಡಬೇಕು.ಹೇಗೆ ಓದುತ್ತಾರೆ ಎಂಬುದು ಮುಖ್ಯವಾಗಿರುತ್ತದೆ.ಕೇವಲ ಅಂಕ ಮಾತ್ರ ಬದುಕಿಗೆ ಸಾಲದು.ಕೆಲಸ ,ವಪೋಸ್ಟ್ ಆಫೀಸ್ ನ ತರಹ ಮಾಡಬೇಕು. ಕೆಲಸವನ್ನು ಹಂಚಿಕೊಂಡು ಮಾಡಬೇಕು.ಆಗ ಹಣ ನಮ್ಮನ್ನು ಹಿಂಬಾಲಿಸುತ್ತಾ ಬರುತ್ತದೆ. ಆತ್ಮವಿಶ್ವಾಸ ಎಲ್ಲು ಅದನ್ನು ನಾವೇ ಪಡೆದುಕೊಳ್ಳಬೇಕು.ಹೀಗೆ ವಿದ್ಯಾರ್ಥಿಗಳ ಬದುಕಿಗೆ ಹಾಗೂ ಹೆತ್ತವರ ಜವಾಬ್ದಾರಿಯ ಕುರಿತಾಗಿ ಮಾಹಿತಿ ನೀಡಿದರು. ಶಾಲಾ ಸ್ವಾಗತದ್ವಾರ ಸರ್ವರನ್ನು ಕೈಬೀಸಿ ಪುಟಾಣಿ ಮಕ್ಕಳ ಬೆಂಕಿ ಇಲ್ಲದ ಅಡುಗೆಯ ಘಮಲು ಎಲ್ಲರನ್ನು ಆಕರ್ಷಿಸುತ್ತಿತ್ತು. ಹೀಗೆ ವಿವಿಧ ಅತಿಥಿ ಅಭ್ಯಾಗತರ ಭೇಟಿಯೊಂದಿಗೆ ಬೇಸಿಗೆ ಶಿಬಿರ ಸಮಾಪ್ತಿಗೊಂಡಿತು.ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಹಾಗೂ ವಸತಿ ನಿಲಯಗಳ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀಯುತ ಪೂರಣ್ ವರ್ಮ ಭೇಟಿ ನೀಡಿ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಪ್ರಶಂಸಿಸಿದರು. ಇವರ ಜೊತೆಗೆ ಎಸ್ ಡಿ ಎಮ್ ಮಲ್ಟಿಮೀಡಿಯಾದ ಮೇಲ್ವಿಚಾರಕರಾಗಿರುವ ಶ್ರೀಯುತ ಸುನಿಲ್ ಇವರಿಗೆ ಜೊತೆ ನೀಡಿದರು.ಕುಮಾರಿ ಸಂಜನಾ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ಸಾಂಡ್ರ ಸ್ವಾಗತಿಸಿ,ನಿಶಾಂತ್ ಅತಿಥಿಗಳ ಪರಿಚಯ ನೀಡಿ,ಕುಮಾರಿ ಹಂಸಿನಿ ಧನ್ಯವಾದ ಇತ್ತರು. ಶಾಲಾ ಹೆತ್ತವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Related post

Leave a Reply

Your email address will not be published. Required fields are marked *

error: Content is protected !!