• December 6, 2024

ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಬಿಜೆಪಿ ಜಿಲ್ಲಾ ಎಸ್ ಸಿ ಸಮಾವೇಶ

 ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ  ಬಿಜೆಪಿ ಜಿಲ್ಲಾ ಎಸ್ ಸಿ ಸಮಾವೇಶ

 

ಬಿಜೆಪಿ ಕರ್ನಾಟಕ,ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಮಾ.20 ರಂದು ಎಸ್ ಸಿ ಸಮಾವೇಶ ಕಾರ್ಯಕ್ರಮ ಜರುಗಿತು.

ಈ ವೇಳೆ ಬಿಜೆಪಿ ಸರ್ಕಾರ ಎಸ್ ಸಿ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಮೆಲುಕುಹಾಕಲಾಯಿತು.

ಕಾರ್ಯಕ್ರಮವನ್ನು ಸಮಾವೇಶದ ರಾಜ್ಯ ಸಂಚಾಲಕ ಮಹೇಂದ್ರ ಕೊತ್ಪಾಲ ದೀಪ ಬೆಳಗಿಸಿ ಉದ್ಘಾಟಿಸಿ, ಅಧ್ಯಕ್ಷತೆಯನ್ನು ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿನಯಚಂದ್ರ ವಹಿಸಿದ್ದರು.

ಇದೆ ಸಂಧರ್ಭದಲ್ಲಿ ಪಕ್ಷದ ಸಿದ್ಧಾಂತ ಮತ್ತು ಅಭಿವೃದ್ಧಿಯ ರಾಜಕಾರಣವನ್ನು ಮೆಚ್ಚಿ ಕಣಿಯೂರು ಗ್ರಾಮದ ಸೀತಾರಾಮ ಮಡಿವಾಳ, ಕಾಂತಪ್ಪ ನಾಯ್ಕ,ನಿತಿನ್ ಒಳಬಾವು, ಕೃಷ್ಣಪ್ಪ ಮಡಿವಾಳ,ರುಕ್ಮಯ ಗೌಡ ಹಾಗೂ ಬಂದಾರು ಗ್ರಾಮದ ರಂಜಿತ್ ಬಾಂಗೇರು ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ಸರ್ಕಾರದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಸ್ ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!