ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿ ಯುವ ಸಮುದಾಯಕ್ಕೆ ಮಾದರಿಯಾದ ಸ್ನಾತಕೋತ್ತರ ಪದವೀಧರ ಚಂದ್ರಹಾಸ ಬಳಂಜ
ಬೆಳ್ತಂಗಡಿ : ಇಂದಿನ ಯುವಜನತೆಗೆ ಮಾದರಿಯಾಗುವಂತೆ ಉತ್ತಮ ಕಾರ್ಯವನ್ನು ಮಾಡಿದ ಸ್ನಾತಕೋತ್ತರ ಪದವೀಧರ ಚಂದ್ರಹಾಸ ಬಳಂಜರವರು ಯುವ ಶಕ್ತಿ ಪಥ ತಂಡದೊಂದಿಗೆ ಜೊತೆಯಾಗಿ ಸೇರಿ ತನ್ನ ಕೇಶವನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿ ಯುವಜನತೆಗೆ ಸ್ಪೂರ್ತಿಯಾಗಿರುವುದು ಶ್ಲಾಘನೀಯ.
ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜರವರು. ಇಂದಿನ ಯುವಜನತೆ ಮಾಡಬೇಕಾದ ಉತ್ತಮ ಕಾರ್ಯಗಳಲ್ಲಿ ಇದು ಒಂದು. ಅಂತಹ ಅತ್ಯುತ್ತಮ ಕಾರ್ಯವನ್ನು ಮಾಡಿ ಕ್ಯಾನ್ಸರ್ ಪೀಡಿತರಿಗೆ ಹೊಸ ಭರವಸೆಯನ್ನು ತುಂಬುವಲ್ಲಿ ಸಹಕಾರಿಯಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಇವರು ತಮ್ಮ ಪ್ರತಿಭೆ ಮುಖೇನ ರಾಜ್ಯ,ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನ ಪಡೆದಿದ್ದು ಒಬ್ಬ ತರಬೇತುದಾರರಾಗಿಯೂ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ , ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ತರಬೇತಿಗಳನ್ನ ನಡೆಸುತ್ತ ಬರುತ್ತಿದ್ದಾರೆ.
ಇವರು ಸಂತೋಷ್ ಪಿ ಕೋಟ್ಯಾನ್ ಬಳಂಜರವರ ಸಹೋದರ.