ಬೆಳ್ತಂಗಡಿ ಅಭಿವೃದ್ಧಿ ಯತ್ತ ಶಾಸಕರ ಚಿತ್ತ: ಒಂದೇ ದಿನ 35 ಕಡೆಗಳಲ್ಲಿ ಶಿಲಾನ್ಯಾಸ!
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿ ಯತ್ತ ಹೆಜ್ಜೆ ಇಟ್ಟ ಶಾಸಕ ಹರೀಶ್ ಪೂಂಜರು ಅನೇಕ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, ಇದೀಗ ಶಾಸಕರು ಮತ್ತೆ ಮಾ.7 ರಂದು ಒಂದೇ ದಿನ 35 ಕಡೆಗಳಲ್ಲಿ ಶಿಲಾನ್ಯಾಸ ನೆರವೇರಿಸಿ ಬೆಳ್ತಂಗಡಿಯನ್ನು ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯ ಹೆಜ್ಜೆಯನ್ನಿಟ್ಟಿದ್ದಾರೆ.
ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದ ಪ್ರದೇಶಗಳನ್ನು ಅಭಿವೃದ್ಧಿ ಮಾಡುತ್ತಾ ಬಂದಿರುವ ಶಾಸಕರು ಇಂದು ಬೆಳಗ್ಗೆ 7 ಗಂಟೆಯಿಂದಲೇ 400 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ.
2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಿರುವ ಸಾವ್ಯ ಗ್ರಾಮದ ಕರೆಂಬಿಲೆಕ್ಕಿ ಎಂಬಲ್ಲಿ 2 ಕೋಟಿ ರೂ ವೆಚ್ಚದಲ್ಲಿ ಸೇತುವೆ ಕಾಮಗಾರಿ, 2 ಕೋಟಿ ರೂ ವೆಚ್ಚದಲ್ಲಿ ಆರಂಬೋಡಿ ಗ್ರಾಮದ ಕೂಡುರಸ್ತೆಯಿಂದ ಗ್ರಾಮ ಪಂಚಾಯತ್ ಸಂಪರ್ಕ ರಸ್ತೆ ಮತ್ತು ಆರಂಬೋಡಿ ಹನ್ನೆರಡುಕವಲು ಹೊಕ್ಕಾಡಿಗೋಳಿ ಸಂಪರ್ಕ ರಸ್ತೆ, ಅಭಿವೃದ್ಧಿ ಕಾಮಗಾರಿಗೆ , 2.5 ಕೋಟಿ ರೂ ವೆಚ್ಚದಲ್ಲಿ ಕಾಶೊಪಟ್ನ ಪಡ್ಡಂದಡ್ಕ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಾಗೂ 2 ಕೋಟಿ ರೂ ವೆಚ್ಚದಲ್ಲಿ ಬೊಳ್ಳಾಜೆ ಡೆಂಜೋಳಿ ಗರ್ಡಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಬೆಳ್ತಂಗಡಿ ನಗರ, ಮಚ್ಚಿನ, ಬಾರ್ಯ ಹೀಗೆ ವಿವಿಧ ಕಾಮಗಾರಿಗಳಿಗೆ ಇಂದು ಶಾಸಕ ಹರೀಶ್ ಪೂಂಜ ರವರು ಶಿಲಾನ್ಯಾಸ ನೆರವೆರಿಸಲಿದ್ದಾರೆ.