• December 6, 2024

ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ ಯಶಸ್ವಿ ಕೀ ರಂಧ್ರ ಶಸ್ತ್ರಚಿಕಿತ್ಸೆ

 ಉಜಿರೆ ಬೆನಕ ಹೆಲ್ತ್ ಸೆಂಟರ್ ನಲ್ಲಿ  ಯಶಸ್ವಿ ಕೀ ರಂಧ್ರ ಶಸ್ತ್ರಚಿಕಿತ್ಸೆ

 


ಉಜಿರೆ: ಬೆನಕ ಹೆಲ್ತ್ ಸೆಂಟರ್ ಉಜಿರೆ ಯಲ್ಲಿ ಸ್ತ್ರೀ ರೋಗ ತಜ್ಞೆ ಡಾ. ಅಂಕಿತ ಜಿ ಭಟ್ ಅವರು ಮಹಿಳೆಯೊಬ್ಬರ ಗರ್ಭಕೋಶದ ದೊಡ್ಡ ಗಾತ್ರದ ಗೆಡ್ಡೆಯನ್ನು ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಫೆ.27 ರಂದು ಹೊರತೆಗೆದಿದ್ದಾರೆ.

43 ವರ್ಷದ ಮಹಿಳೆಗೆ ಬಾಧಿಸಿದ್ದ ಗರ್ಭಕೋಶದ ಗೆಡ್ಡೆಯನ್ನು ಸ್ತ್ರೀ ರೋಗ ತಜ್ಙೆ ಡಾ‌‌. ಅಂಕಿತ ಜಿ ಭಟ್ ಇವರು 3ಗಂಟೆಗಳ ಸತತ ಪ್ರಯತ್ನದ ಮೂಲಕ ಯಶಸ್ವಿಯಾಗಿ ಕೀ ರಂದ್ರ ಚಿಕಿತ್ಸೆ (Lap hysterectomy) ನೆರವೇರಿಸಿ ಸುಮಾರು 1.6 kg ಗಾತ್ರದ ಮಾಂಸ ಗೆಡ್ಡೆಯನ್ನೆ ಹೊರತೆಗೆದಿದ್ದಾರೆ.ಇದೀಗ ರೋಗಿ ಗುಣಮುಖರಾಗುತ್ತಿದ್ದಾರೆ.

ತನ್ನ ಕಿರಿ ವಯಸ್ಸಿನಲ್ಲಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಯನ್ನು ನೆರವೇರಿಸಿದ ಇವರ ಸಾಧನೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಎರಡು ದಶಕಗಳಿಂದ ಉಜಿರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವ ಬೆನಕ ಹೆಲ್ತ್ ಸೆಂಟರ್ NABH ಮಾನ್ಯತೆ ಪಡೆದಿದೆ. ರೋಗಿಗಳಿಗೆ ಅತ್ಯುತ್ತಮ ಸೇವೆ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ಆಸ್ಪತ್ರೆಯಲ್ಲಿ ಅತ್ಯಂತ ಅಪರೂಪದ ಕೀ ರಂದ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿರುವುದು ಮತ್ತೊಂದು ಗರಿಮೆಗೆ ಒಳಗಾಗಿದೆ.

Related post

Leave a Reply

Your email address will not be published. Required fields are marked *

error: Content is protected !!