ಬರೆಂಗಾಯ: ದೀಪಿಕಾ ಎಂ ರವರ ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆಗೆ ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ವತಿಯಿಂದ 1,00,000 ರೂ ಹಸ್ತಾಂತರ
![ಬರೆಂಗಾಯ: ದೀಪಿಕಾ ಎಂ ರವರ ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆಗೆ ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ವತಿಯಿಂದ 1,00,000 ರೂ ಹಸ್ತಾಂತರ](https://namanachannel.in/wp-content/uploads/2023/02/IMG-20230226-WA0013-850x560.jpg)
ಬರೆಂಗಾಯ: ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬರೆಂಗಾಯ ಮಜಲ್ ಮಾರ್ ಮನೆ ಸಂಜೀವ ಗೌಡರ ಪುತ್ರಿ ದೀಪಿಕಾ ಎಂ ರವರು Chronic Myeloid Leukemia ಎಂಬ ರೋಗದಿಂದ ಬಳಲುತ್ತಿದ್ದಾರೆ. ಇವರು ಆರೋಗ್ಯವಂತರಾಗಲು ಅಸ್ತಿಮಜ್ಜೆ ಶಸ್ತ್ರಚಿಕಿತ್ಸೆಗೆ ಸುಮಾರು 35 ಲಕ್ಷ ರೂ ವೆಚ್ಚವಾಗುತ್ತದೆ. ಇದನ್ನು ಮನಗಂಡ ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ಇವರ ಸಹಾಯದಿಂದ ದೀಪಿಕಾ ಎಂ ರವರ ಶಸ್ತ್ರಚಿಕಿತ್ಸೆಗೆ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ 1,00,000 ರೂಪಾಯಿಯನ್ನು ಹಸ್ತಾಂತರ ಮಾಡಲಾಯಿತು.
ಈ ವೇಳೆ ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ಇದರ ಸದಸ್ಯರು ಭಾಗಿಯಾಗಿದ್ದರು