ಜ. 14- 23 ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ
ಉಜಿರೆ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ನೇತೃತ್ವದಲ್ಲಿ ಜ. 14 ಮಕರ ಸಂಕ್ರಮಣದಿಂದ ಮೊದಲ್ಗೊಂಡು ಜ. 23 ರ ವರೆಗೆ ವಿವಿಧ ಧಾರ್ಮಿಕ,ವೈದಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ನಡೆಯಲಿದೆ ಎಂದು ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯರು ತಿಳಿಸಿದ್ದಾರೆ.
ಜ. 14 ಮಕರ ಸಂಕ್ರಮಣ , ಶನಿವಾರ ರಾತ್ರಿ ಧ್ವಜಾರೋಹಣ,ಭಂಡಾರ ಏರುವುದರೊಂದಿಗೆ ಪ್ರಾರಂಭಗೊಳ್ಳುವ ವರ್ಷಾವಧಿ ಜಾತ್ರಾ ಮಹೋತ್ಸವವು ಜ.15 ರಂದು ಬದಿ ಮೇಲೆ ಉಳ್ಳಾಲ್ತಿ,ಪೊಸಲ್ತಾಯಿ ,ಕುಮಾರಸ್ವಾಮಿ ದೈವಗಳಿಗೆ ನೇಮ,ಜ. 16 ರಂದು ಸಂಜೆ ಬದಿಮೇಲೆ ನೆತ್ತರಮುಗುಳಿ ದೈವಗಳ ನೇಮ ನಡೆದು ರಾತ್ರಿ ಭಂಡಾರ ಇಳಿದು, ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಂಟಪ ಉತ್ಸವ,ಜ. 17 ರಂದು ರಾತ್ರಿ ಅಶ್ವತ್ಥಕಟ್ಟೆ ಉತ್ಸವ ,ಜ. 18 ರಂದು ರಾತ್ರಿ ಪುಷ್ಕರಣಿ ಕಟ್ಟೆ ಉತ್ಸವ ,ಜ.19 ರಂದು ರಾತ್ರಿ ಪೇಟೆ ಸವಾರಿ ,ಜ. 20 ರಂದು ರಾತ್ರಿ ಚಂದ್ರಮಂಡಲ ರಥೋತ್ಸವ,ಜ. 21 ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ ,ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,ರಾತ್ರಿ ಶ್ರೀ ಜನಾರ್ದನ ಸ್ವಾಮಿ ಮತ್ತು ಮಂಜುಳೇಶ ದೇವರ ವಿವಿಧ ವಾದ್ಯ ಮೇಳಗಳ ಸುತ್ತು ಬಲಿ ಉತ್ಸವ ನಡೆದು ರಥಬೀದಿಯಲ್ಲಿ ಮಹಾರಥೋತ್ಸವ ಹಾಗೂ ರಾತ್ರಿ ಶ್ರೀ ಭೂತ ಬಲಿ ನಡೆಯಲಿದೆ. ಜ,22ರಂದು ಬೆಳಿಗ್ಗೆ ಕವಾಟೋದ್ಘಾಟನೆ ಹಾಗು ಸಂಜೆ ಶ್ರೀ ದೇವರು ಅವಭ್ರತ ಸ್ನಾನಕ್ಕೆ ನೇತ್ರಾವತಿ ನದಿಗೆ ತೆರಳುವುದು ಹಾಗೂ ಮರಳಿ ಬಂದ ಬಳಿಕ ಧ್ವಜಾವರೋಹಣ,ಜ 23. ರಂದು ಬೆಳಿಗ್ಗೆ ಕಲಶಾಭಿಷೇಕ ಹಾಗೂ ಮಹಾಸಂಪ್ರೋಕ್ಷಣೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ : ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಶಾರದಾಮಂಟಪದಲ್ಲಿ ಜ 20. ರಂದು ಸಂಜೆ 6.30 ರಿಂದ ದ ಕಲ್ಮನ್ಜದ ಭಿಡೆ ಸಹೋದರಿಯರಿಂದ ನೃತ್ಯ ವೈಭವ,ರಾತ್ರಿ 7.30. ರಿಂದ ಮುಂಡ್ರುಪ್ಪಾಡಿಯ ನಿನಾದ ಕ್ಲಾಸಿಕಲ್ಸ್ ನ ಶ್ರೀದೇವಿ ಸಚಿನ್ ಮತ್ತು ತಂಡದವರಿಂದ ದಾಸವಾಣಿ ಮತ್ತು ಸುಗಮ ಸಂಗೀತ,ರಾತ್ರಿ 9 ರಿಂದ ದೇವಿ ಕಿರಣ್ ಕಲಾನಿಕೇತನ ಉಜಿರೆ ಇದರ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪ್ರಥ್ವಿ ಸತೀಶ್ ಅವರ ಶಿಷ್ಯವೃಂದದವರಿಂದ “ನೃತ್ಯಾರ್ಪಣಂ “, ಜ 21 ರಂದು ಸಂಜೆ 6.30.ರಿಂದ ಉಜಿರೆಯ ಸರ್ವೇಶ್ ದೇವಸ್ಥಳಿ ಮತ್ತು ತಂಡದವರಿಂದ “ಸಂಗೀತ ಸುಧೆ”,.ರಾತ್ರಿ 8 ರಿಂದ ಮೈಸೂರಿನ ವಿದುಷಿ ಮಧುರ ಕಾರಂತ್ ಅವರಿಂದ ಭರತ ನಾಟ್ಯ “ನೃತ್ಯ ಸಂಭ್ರಮ” ಹಾಗು ರಾತ್ರಿ 9 ರಿಂದ ಉಜಿರೆಯ ಯಕ್ಷಸುಗಂಧ ತಂಡದ ಕಲಾವಿದರಿಂದ “ಮಕರಾಕ್ಪ ಕಾಳಗ “ಪ್ರಸಂಗದ ಯಕ್ಷಗಾನ ಪ್ರದರ್ಶನ ,ಜ 22. ರಂದು ಸಂಜೆ 7 ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾವಿದ ಉದಯಕುಮಾರ್ ಲಾಯಿಲ ಅವರ ಪರಿಕಲ್ಪನೆ,ಸಂಯೋಜನೆ ಹಾಗು ನಿರ್ದೇಶನದ , ಉಜಿರೆಯ ಪ್ರಗತಿ ಮಹಿಳಾ ಮಂಡಳಿಯ ಕಲಾವಿದರಿಂದ “ತುಳುನಾಡ ಐಸಿರಿ “ಜಾನಪದ ಕಾರ್ಯಕ್ರಮ ನಡೆಯಲಿದೆ. ಭಗದ್ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅವರು ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.
ReplyForward |