• September 21, 2024

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತರಬೇತಿ ಕಾರ್ಯಕ್ರಮ

 ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ಜ.7 ರಂದು ಕಾರ್ಯಕ್ರಮಗಳ ನಿರ್ವಹಣೆಗಳ ಬಗ್ಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸುಬ್ರಮಣ್ಯ.ಕೆ ಮುಖ್ಯ ಅಥಿತಿಯಾಗಿ ಪಾಲ್ಗೊಂಡರು. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಹಾಗೂ ಪ್ರಾವಿಷನಲ್ ವಲಯ ತರಬೇತುದಾರ ಜೇಸಿ ಶಂಕರ್ ರಾವ್ ಮತ್ತು ಘಟಕದ ಕಾರ್ಯದರ್ಶಿ, ಪ್ರಾವಿಷನಲ್ ವಲಯ ತರಬೇತುದಾರ ಜೆಸಿ ಸುಧೀರ್ ಕೆ. ಎನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಯೋಜನಾಧಿಕಾರಿಗಳಾದ ಪ್ರೊ. ಗಂಗಾಧರ್, ಡಾ. ಸುಮನ್ ಎನ್. ಶೆಟ್ಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ನಿಕಟ ಪೂರ್ವಅಧ್ಯಕ್ಷರಾದ ಜೇಎಫ್ ಎಂ ಪ್ರಸಾದ್ ಬಿ. ಎಸ್ ಉಪಸ್ಥಿತರಿದ್ದರು.

ಪೂರ್ವಧ್ಯಕ್ಷರಾದ ಜೆಎಫ್ ಎಮ್ ಚಿದಾನಂದ ಇಡ್ಯಾ ವೇದಿಕೆಗೆ ಗೌರವಾನ್ವಿತರನ್ನು ಬರಮಾಡಿಕೊಂಡರು, ಸದಸ್ಯ ಜೆಸಿ ಶೈಲೇಶ್ ಜೆಸಿ ವಾಣಿ ವಾಚಿಸಿದರು, ಕಾರ್ಯದರ್ಶಿ ಸುಧೀರ್ ಕೆ. ಎನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಘಟಕದ ಪೂರ್ವಧ್ಯಕ್ಷರಾದ ಜೆಎಫ್ ಎಮ್ ನಾರಾಯಣ ಶೆಟ್ಟಿ, ಉಪಾಧ್ಯಕ್ಷರುಗಳಾದ ಜೆಎಫ್ ಎಮ್ ಹೇಮಾವತಿ, ಜೇಸಿ ಹೆಚ್ ಜಿಎಫ್ ಪ್ರೀತಮ್ ಶೆಟ್ಟಿ, ಸದಸ್ಯರಾದ ಅನುದೀಪ್ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!