ಏಮಾಜೆ ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯ ಸಹಶಿಕ್ಷಕಿ ತ್ರಿವೇಣಿಯವರಿಗೆ ಗೌರವ ಡಾಕ್ಟರೇಟ್ ಪದವಿ:ಶಾಲಾ ಮಕ್ಕಳಿಂದ ಸ್ವಾಗತ
ಕಬಕ: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಏಮಾಜೆ ಇಲ್ಲಿ ಸುಮಾರು 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಸದಾ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ತ್ರಿವೇಣಿಯವರು ಗೌರವ ಡಾಕ್ಟರೇಟ್ ಪದವಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ಇಂದು ಶಾಲಾ ಮಕ್ಕಳು ಹೂಗುಚ್ಛ ನೀಡಿ ಗೌರವ ಪೂರ್ವ ಕವಾಗಿ ಸ್ವಾಗತಿಸಿದರು.
ಇವರಿಗೆ ಜು.24 ರಂದು ಗೋವಾದಲ್ಲಿ ರೆಜೆನ್ಸಿ ಇಂಟರ್ ನ್ಯಾಷನಲ್ ಥಿಯೋಲಾಜಿಕಲ್ ಯೂನಿವರ್ಸಿಟಿ ಒಂಟಾರಿಯೋ ಕೆನಡಾದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಬಂಟ್ವಾಳ ತಾಲೂಕಿನ ಮೆಲ್ಕಾರ್ ಶಾಖೆಯ ಮೆಸ್ಕಾಂ ಉದ್ಯೋಗಿ ಮುಜಲ ರಮೇಶ್ ಪೂಜಾರಿಯವರ ಪತ್ನಿ.
ತ್ರಿವೇಣಿಯವರು 2019-20 ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.