ಗುರುವಾಯನ ಕೆರೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶಂಕೆ: ಹುಡುಕಾಟ ನಡೆಸುತ್ತಿರುವ ಧರ್ಮಸ್ಥಳ ವಿಪತ್ತು ತಂಡ
ಗುರುವಾಯನಕೆರೆ: ನ.30 : ಕೊಂಟುಪಳಿಕೆ ಶಿವಾಜಿನಗರ ನಿವಾಸಿ ಪ್ರವೀಣ್ ಪಿಂಟೋ ಎಂಬವರು ನಾಪತ್ತೆಯಾಗಿದ್ದು ಗುರುವಾಯನಕೆರೆಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ಪಿಂಟೋ ಇಂದು ಬೆಳಿಗ್ಗೆ ತನ್ನ ಮಾಲಕರಿಗೆ ಫೋನ್ ಕರೆ ಮೂಲಕ ಕೆರೆಗೆ ಹಾರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಕೆರೆಯ ಬಳಿ ಬಂದು ನೋಡಿದಾಗ ಅವರ ಚಪ್ಪಲಿ ಹಾಗೂ ಆಧಾರ್ ಕಾರ್ಡ್ ಪತ್ತೆಯಾಗಿದೆ.
ಇವರು ಗುರುವಾಯನಕೆರೆಯಲ್ಲಿ ರಿಕ್ಷಾ ಬಾಡಿಗೆ ಮಾಡಿಕೊಂಡಿದ್ದು ಸ್ನೇಹ ಜೀವಿಯಾಗಿದ್ದರು. ಸಾವಿಗೆ ಕಾರಣ ಏನೆಂಬುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಮಾಹಿತಿ ತಿಳಿದ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಹಾಗೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರವೀಣ್ ಪಿಂಟೋ ಇವರಿಗೆ ಪತ್ನಿ, 4 ವರ್ಷದ ಮಗು ಇದೆ