ನ.28 ರಂದು ಅಳದಂಗಡಿ ಬಸ್ ನಿಲ್ದಾಣದ ಬಳಿ ನಡೆಯಲಿರುವ ಕಾಲಮಿತಿಯ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆ
ಬೆಳ್ತಂಗಡಿ: ಯಕ್ಷ ಬಳಗ ಬೆಳ್ತಂಗಡಿ ಆಶ್ರಯದಲ್ಲಿ, ಯಕ್ಷ ಬಳಗ ಅಳದಂಗಡಿ ವಲಯ ಸಮಿತಿಯ ಸಹಕಾರದೊಂದಿಗೆ ಯಕ್ಷಸಿರಿ 2022 ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಕಾಲ ಮಿತಿಯ ಯಕ್ಷಗಾನ ಬಯಲಾಟ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ನ.28 ರಂದು ಅಳದಂಗಡಿ ಬಸ್ ನಿಲ್ದಾಣದ ಬಳಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಅಜಿಲಾ ಸೀಮೆಯ ಪದ್ಮಪ್ರಸಾದ್ ಅಜಿಲಾ ಇವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು.
ಯುವ ಪೀಳಿಗೆಗೆ ಯಕ್ಷಗಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಯಕ್ಷಗಾನ ಕಲೆ ಮುಂದರಯು ಉಳಿಯಬೇಕು ಅನ್ನುವ ನಿಟ್ಟಿನಲ್ಲಿ ತರಬೇತಿ ಕೇಂದ್ರ ನಡೆಸಿ ಅದರ ಮುಖಾಂತರ ನ.28 ರಂದು ಕಾಲಮಿತಿಯ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಅನ್ನುವ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ಗೌರವಾಧ್ಯಕ್ಷರು ರಕ್ಷಿತ್ ಶಿವರಾಂ, ಅಧ್ಯಕ್ಷರು ಸಂತೋಷ ಗೌಡ ವಳಂಬ್ರ, ಕಾರ್ಯದರ್ಶಿ ನಿತ್ಯಾನಂದ ನಾವರ, ಕೋಶಾಧಿಕಾರಿ ಶೇಖರ್ ಕುಕ್ಕೇಡಿ, ವೀರೇಂದ್ರ ಕುಮಾರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.