• December 8, 2024

ಉಜಿರೆ: ನ.19ರಂದು ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ, “ಯಕ್ಷ ಸಂಭ್ರಮ 2022”

 ಉಜಿರೆ:  ನ.19ರಂದು ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ, “ಯಕ್ಷ ಸಂಭ್ರಮ 2022”

 

ಉಜಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಬೆಳ್ತಂಗಡಿ ಘಟಕ ಇದರ ವತಿಯಿಂದ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿ ಉಜಿರೆಯಲ್ಲಿ ನ.19ರಂದು ಸಂಜೆ ಗಂಟೆ 6ರಿಂದ ಜರುಗಲಿದೆ ಎಂದು ಯಕ್ಷ ಧ್ರುವ ಪಟ್ಲ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಹೇಳಿದರು.

ಅವರು ನ.16ರಂದು ಉಜಿರೆ ಓಷ್ಯನ್ ಪರ್ಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಕಥಾಭಾಗವನ್ನು ನ.19ರಂದು ಸಂಜೆ ಗಂಟೆ 6ರಿಂದ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿ ಉಜಿರೆಯಲ್ಲಿ ನಡೆಯಲಿದ್ದು, ಸಂಜೆ ಗಂಟೆ 8ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಯಕ್ಷದ್ರುವ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ , ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್ , ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್‌ಕೃಷ್ಣ ಪಡ್ನೆವಟ್ನಾಯ ಯು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ.) ಸತೀಶ್ ಶೆಟ್ಟಿ ಪಟ್ಲ, ಲಕ್ಷ್ಮೀ ಗ್ರೂಪ್ಸ್ ಮಾಲಕರಾದ ಮೋಹನ್ ಕುಮಾರ್, ಸಂದ್ಯಾ ಟ್ರೇಡರ್‍ಸ್ ಉಜಿರೆ ಮಾಲಕರಾದ ರಾಜೇಶ್ ಪೈ, ಉಜಿರೆ ಗ್ರಾಮ ಪಂಚಾಯತ್, ಅಧ್ಯಕ್ಷರಾದ ಪುಷ್ಪಾವತಿ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಘಟಕ, ಬೆಳ್ತಂಗಡಿ ಯ ಅಧ್ಯಕ್ಷ  ಸುರೇಶ್ ಶೆಟ್ಟಿ ಲಾಯಿಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಯಕ್ಷ ಧ್ರುವ ಪಟ್ಲ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಭುಜಬಲಿಪ್ರಸಾವಿಕ ವಾಗಿ ಮಾತನಾಡಿದರು.  ಕಾರ್ಯದರ್ಶಿ ಶಿತಿಕಂಠ ಭಟ್ ಧನ್ಯವಿತ್ತರು. ಸದಸ್ಯರಾದ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಗೌರವ ಸಲಹೆಗರಾಗು ಭುಜಬಲಿ, ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀತಿಕಂಠ ಭಟ್ ನಾಳ ಘಟಕದ ಸದಸ್ಯರು ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವಿಶೇಷತೆ: –

ಸಂಜೆ 5.00 ಗಂಟೆಗೆ ಉಜಿರೆಯ ದಿ ಓಷಿಯನ್ ಪರ್ಲ್ ನಿಂದ ಅದ್ದೂರಿ ಮೆರವಣಿಗೆ. 10 ಭಜನಾ ತಂಡ, ಬ್ಯಾಂಡ್ ವಾದನ, ಚೆಂಡೆ, ಕೊಂಬು, ವಿವಿಧ ವೇಷಗಳೊಂದಿಗೆ ದೇವರ ಮೆರವಣಿಗೆ.

ಉಜಿರೆ ಪೇಟೆಯಲ್ಲಿ ರಂಗು ರಂಗಿನ ದೀಪಾಲಂಕಾರ.
ಸುಡುಮದ್ದು ಪ್ರದರ್ಶನ. ಸಂಜೆ 6.30 ರಿಂದ ರಾತ್ರಿ 11.00ರ ತನಕವೂ ಅತಿಥಿ ಸತ್ಕಾರ. 18 ಬಗೆಯ ವಿವಿಧ ತಿಂಡಿ ತಿನಿಸುಗಳು – ವೈವಿಧ್ಯಮಯ ಪಾನೀಯದ ವ್ಯವಸ್ಥೆ. ಊಟದ ವ್ಯವಸ್ಥೆ.

ರಾತ್ರಿ 8.00 ರಿಂದ 8.30 ರ ತನಕ ಸಭಾ ಕಾರ್ಯಕ್ರಮ. ಗಾನಮಂದಾರ ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಯಕ್ಷ ಸಂಭ್ರಮ 2022 ಪ್ರಶಸ್ತಿ ಪ್ರದಾನ ಅಶಕ್ತ ಕಲಾವಿದ ಮನೋಜ್ ಶೆಟ್ಟಿ. ರೂ 2.00 ಲಕ್ಷದ ನೆರವು. ಶಾಸಕ ತ್ರಯರಿಂದ ಅಭಿನಂದನೆ * ಉಜಿರೆಯಲ್ಲಿ ” ಯಕ್ಷಗಾನ ಹಬ್ಬವಾಗಿ “ಆಚರಿಸಲು 1500 ಜನರಿಗೆ ಆಸನದ ವ್ಯವಸ್ಥೆ. ಮಳೆಯಿಂದ ರಕ್ಷಣೆಗೆ ಸಕಲ ಸಿದ್ಧತೆ. ಹಳೆಯ ಯಕ್ಷಗಾನವನ್ನು ನೆನಪಿಸುವಂತಹ ಜನರಿಗೆ ಶೊಜಿ ಚರಂಬುರಿ ಯ ವ್ಯವಸ್ಥೆ

Related post

Leave a Reply

Your email address will not be published. Required fields are marked *

error: Content is protected !!