• December 8, 2024

ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

 ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

 

ಹುಣ್ಸೆಕಟ್ಟೆ: ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ, ಪ್ರಗತಿಬಂಧು ಜ್ಞಾನವಿಕಾಸಗಳ ಮತ್ತು ಸ್ವ- ಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಹಾಗೂ ಶ್ರೀ ರಾಮ ಭಜನಾ ಮಂಡಳಿ( ರಿ) ಹುಣ್ಸೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಪಂಜಿರ್ಪು ಶ್ರೀ ಕೃಷ್ಣ ಕುಮಾರ್ ಐತಾಳ್ ಇವರ ಪೌರೋಹಿತ್ವದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ನ.13 ರಂದು ಸಮುದಾಯ ಭವನ ಹುಣ್ಸೆಕಟ್ಟೆ ಯಲ್ಲಿ ಜರುಗಿತು.

ಶ್ರೀ ರಾಮ ಭಜನಾ ಮಂಡಳಿಯ ಕುಣಿತ ಭಜನಾ ಮಕ್ಕಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆದು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ಕರುಣಾಕರ ಮತ್ತಿತರರು, ಗ್ರಾಮಸ್ಥರು ಉಪಸ್ಥಿತರಿದ್ದರುಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ಕರುಣಾಕರ, ಪ್ರಗತಿ ಬಂಧು ಜ್ಞಾನವಿಕಾಸಗಳ ಸ್ವ.ಸ ಸಂಘಗಳ ಕೇಂದ್ರ ಒಕ್ಕೂಟ ಬೆಳ್ತಂಗಡಿ ಎಸ್ ಕೆ ಡಿ ಆರ್ ಡಿಪಿ ಬೆಳ್ತಂಗಡಿ ವಲಯದ ಅಧ್ಯಕ್ಷರು ಸೀತಾರಾಮ್ ಆರ್, ಸಾ.ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಅಧ್ಯಕ್ಷರು ಲಕ್ಷ್ಮಣ ಪಿ, ಸೇವಾ ಪ್ರತಿನಿಧಿ ವನಿತಾ, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು

Related post

Leave a Reply

Your email address will not be published. Required fields are marked *

error: Content is protected !!