• July 16, 2024

ಬೆಳ್ತಂಗಡಿ: ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಅವಘಡ: ಓರ್ವ ಸಾವು: ಇನ್ನೋರ್ವ ಗಂಭೀರ

 ಬೆಳ್ತಂಗಡಿ: ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಅವಘಡ: ಓರ್ವ ಸಾವು: ಇನ್ನೋರ್ವ ಗಂಭೀರ

ಬೆಳ್ತಂಗಡಿ: ಬೆಳ್ತಂಗಡಿ ರಾಜಧಾನಿ ಜ್ಯುವೆಲ್ಸ್ ಮುಂಭಾಗ ಬ್ಯಾನರ್ ಅಳವಡಿಕೆ ವೇಳೆ ವಿದ್ಯುತ್ ಶಾಕ್ ಹೊಡೆದು , ಓರ್ವ ಸಾವು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ನ.8 ರಂದು ನಡೆದಿದೆ.

ತಕ್ಷಣ ಅಲ್ಲಿದ್ದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ

ಬೆಳ್ತಂಗಡಿ ಕೋರ್ಟ್ ನಿವಾಸಿ, ಗೂಡ್ಸ್ ವಾಹನ ಚಾಲಕ ಪ್ರಶಾಂತ್ ಆಚಾರ್ಯ ( 32) ಸಾವನ್ನಪ್ಪಿದವರು. ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಸತೀಶ್ (25) ಗಂಭಿರ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬ್ಯಾನರ್ ನ ಕಬ್ಬಿಣ ರಾಡ್ ವಿದ್ಯುತ್ ಲೈನ್ ನ ತಂತಿಗೆ ತಾಗಿದ್ದು, ಈ ವೇಳೆ ಕೆಲಸದ ಇಬ್ಬರು ಯುವಕರಿಗೆ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ.

ಘಟನೆ ಮಾಹಿತಿ ಪಡೆದು ಸಾವಿರಾರು ಮಂದಿ ಜಮಾಯಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!