• December 8, 2024

ಬಜಗೋಳಿ:ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

 ಬಜಗೋಳಿ:ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

 

ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು

ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀವರ್ಮ ಅಜ್ರಿ ಇವರು ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿ ಕೊಡುವಲ್ಲಿ ಶಿಬಿರವು ಅತ್ಯಂತ ಯಶಸ್ವಿಯಾಗಿದೆ ಎಂದು
ಅಭಿಪ್ರಾಯಪಟ್ಟರು

ಇದೇ ಸಂದರ್ಭದಲ್ಲಿ ಹತ್ತು ವರ್ಷಗಳಿಂದ ಎನ್ನೆಸ್ಸೆಸ್ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡಿದ ಎನ್ನೆಸ್ಸೆಸ್ ಹಿತೈಷಿಗಳಾದ ಡಾ. ವೆಂಕಟಗಿರಿ ರಾವ್ ,ಅನಿಲ್ ಎಸ್ ಪೂಜಾರಿ , ದಿವಾಕರ ಶೇರ್ವೆಗಾರ್, ಸುರೇಶ್ ದೇವಾಡಿಗ, ಸಂದೀಪ್ ಶೆಟ್ಟಿ, ಸಲೀಮ್, ನವೀನ್ ಅಂಚನ್,ಕೃಷ್ಣ ಹಾಗೂ ಶಿಬಿರಕ್ಕೆ ಸಹಕರಿಸಿದ ಬಸವರಾಜ್ ತಾವರಗಿ, ಭವಿತ್ ,ಅಡುಗೆ ಸಹಾಯಕರಾದ ಸುಹಾಸಿನಿ ಮತ್ತು ಯಶೋಧ ಇವರನ್ನು ಸನ್ಮಾನಿಸಲಾಯಿತು
ಸನ್ಮಾನ ಕಾರ್ಯಕ್ರಮವನ್ನು ಬಾಲಕೃಷ್ಣ ರಾವ್ ನಿರ್ವಹಿಸಿದರು

ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಇವರಿಗೆ ಸಂಸ್ಥೆಯ ವತಿಯಿಂದ ಹಾಗೂ ಊರಿನವರ ವತಿಯಿಂದ ಸನ್ಮಾನ ಕಾರ್ಯಕ್ರಮಗಳು ನಡೆಯಿತು ಇದನ್ನು ನಾಗೇಶ್ ನೆರವೇರಿಸಿ ಕೊಟ್ಟರು

7ದಿನಗಳ ಕಾಲ ನಡೆದ ಶಿಬಿರದಲ್ಲಿ ಮುನಿರಾಜ ರೇಂಜಾಳ ಇವರಿಂದ “ಸಾಮಾಜಿಕ ಕಳಕಳಿ”, ರಾಜೇಂದ್ರ ಭಟ್ ಇವರಿಂದ “ನಾಯಕತ್ವ” ಸಂತೋಷ್ ಮಾಳ ಇವರಿಂದ “ಕರಕುಶಲ ತರಬೇತಿ” ಗಣೇಶ್ ಜಾಲ್ಸೂರ್ ಇದರಿಂದ “ಮನೋರಂಜನಾ ಆಟದಲ್ಲಿ ಬುದ್ಧಿವಂತಿಕೆ”, ಸುಂದರ್ ಎಸ್. ಎಂ ಇದರಿಂದ ಮಾನಸಿಕ ಒತ್ತಡ ನಿರ್ವಹಣೆ ಮತ್ತು ಸಾಧನೆಗೆ ಪ್ರೇರಣೆ ” ಕೃಷ್ಣದಾಸ್ ಪ್ರಭು ಇವರಿಂದ ಯೋಗ ತರಬೇತಿ ,
ರಾಹ್ಯ ಗೃಹರಕ್ಷಕ ದಳ ಉಡುಪಿ ಇವರ ವತಿಯಿಂದ “ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ” ಕಾರ್ಯಕ್ರಮ ,
ಕಾರ್ಕಳ ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ
ವಿಠಲ್ ನಾಯಕ್ ವಿಟ್ಲ ಇವರಿಂದ”ಗೀತ ಸಾಹಿತ್ಯ ಸಂಭ್ರಮ” “ಮುಂತಾದ ವಿನೂತನ ಕಾರ್ಯಕ್ರಮಗಳು ಜರುಗಿದವು

ಸಾಧನೆ ಮಾಡಿದ ನಿಕಟಪೂರ್ವ ವಿದ್ಯಾರ್ಥಿಗಳಾದ
ಹಿಮಾಲಯ ಪರ್ವತಾರೋಹಣ ಶಿಬಿರದಲ್ಲಿ 3ಬಾರಿ ಭಾಗವಹಿಸಿದ್ದ ಸುಮಲತಾ ,ಮಹಾತ್ಮಾ ಗಾಂಧಿ ಸದ್ಭಾವನ ಪ್ರಶಸ್ತಿ ವಿಜೇತ ಸಂತೋಷ್. ಪಿ ಮಾಳ , ಚಿತ್ರಕಲಾಕಾರ ಪ್ರಶಾಂತ ಆಚಾರ್ಯ , ನಾಟಕಕಾರ ಗುರುಪ್ರಸಾದ್ ಪೇರಡ್ಕ ,ಸಂಗೀತಗಾರ ನಿತಿನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು

“ಸ್ವಚ್ಛ ಬ್ರಿಗೇಡ್ ಬಜಗೋಳಿ “ಇವರ ಸಹಯೋಗದೊಂದಿಗೆ ಬಜಗೋಳಿ ಪೇಟೆಯಲ್ಲಿ “ಸ್ವಚ್ಚತಾ ಆಂದೋಲನ” ನಡೆಸಲಾಯಿತು

ಸಮಗ್ರ ತಂಡವಾಗಿ “ಸಮಷ್ಟಿ” ಅತ್ಯುತ್ತಮ ತಂಡವಾಗಿ “ಬೆಳಕು” ಉತ್ತಮ ತಂಡವಾಗಿ “ಚಿಗುರು” ತಂಡಗಳು ಪ್ರಶಸ್ತಿಯನ್ನು ಪಡೆದುಕೊಂಡವು

ನಿಕಟಪೂರ್ವ ವಿದ್ಯಾರ್ಥಿ ಜಿತೇಶ್ ಇವರ ವತಿಯಿಂದ ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಸಂಪತ್ ಇವರಿಗೆ ನೀಡಿ ಗೌರವಿಸಲಾಯಿತು

ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ವಯಂಸೇವಕರನ್ನು ಅಭಿನಂದಿಸಲಾಯಿತು

ಸಮಾರಂಭದ ಅಧ್ಯಕ್ಷತೆಯನ್ನು ಡಾ. ವೆಂಕಟಗಿರಿ ರಾವ್ ನಿರ್ವಹಿಸಿದರು ,

ವೇದಿಕೆಯಲ್ಲಿ ರವೀಂದ್ರ ಶೆಟ್ಟಿ,
ಅಮೃತ ಪ್ರಭು , ಅನಿಲ್. ಎಸ್ ಪೂಜಾರಿ, ದೇವದಾಸ್ ಪಾಟ್ಕರ್, ರಜತ್ ರಾಮ್ ಮೋಹನ್, ಸುರೇಶ್ ದೇವಾಡಿಗ ,
ಗೀತಾ ಪಾಟ್ಕರ್ ,
ಸಲೀಮ್ ,ದಿವಾಕರ ಶೇರ್ವೆಗಾರ್
ವೀರೇಂದ್ರ ವಿ .ಪಿ ಉಪಸ್ಥಿತರಿದ್ದರು

ಪ್ರಾಂಶುಪಾಲ
ಕೆ.ಪಿ ಲಕ್ಷ್ಮೀನಾರಾಯಣ ಸ್ವಾಗತಿಸಿ ಕಾರ್ಯಕ್ರಮಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು, ಕನ್ನಡ ಅತಿಥಿ ಉಪನ್ಯಾಸಕರಾದ ಶ್ರೀ ವಿಕ್ರಮ್ ಹಾಗು ಸ್ವಯಂ ಸೇವಕಿ ಪ್ರತೀಕ್ಷಾ ಇವರು ಕಾರ್ಯಕ್ರಮ ನಿರೂಪಿಸಿದರು

Related post

Leave a Reply

Your email address will not be published. Required fields are marked *

error: Content is protected !!