ಪುತ್ತೂರು: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಕ್ಫ್ ಬೋರ್ಡ್ ಮತ್ತು ವಕ್ಫ್ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ
ಪುತ್ತೂರು : ದೇಶದಲ್ಲಿ ಕಾರ್ಯಾ ನಿರ್ವಹಿಸುತ್ತಿರುವ ವಕ್ಫ್ ಬೋರ್ಡ್ ಮತ್ತು ವಕ್ಫ್ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ .ಕ ಜಿಲ್ಲಾ ಸಹಸಂಚಾಲಕರಾದ ದಿನೇಶ್ ಕುಮಾರ್ ಜೈನ್ ದೇಶದ ಅತೀ ಹೆಚ್ಚು ಭೂಮಿ ಮೊದಲಿಗೆ ರೈಲ್ವೆ ಇಲಾಖೆ, ಎರಡನೇಯದು ಭಾರತೀಯ ಸೇನೆಯಲ್ಲಿ ಮತ್ತು ಮೂರನೇಯದು ವಕ್ಫ್ ಬೋರ್ಡ್ ಹೊಂದಿದೆ. ದೇಶದ ಸ್ವಾತಂತ್ರ್ಯನಂತರದ ಅಸ್ತಿತ್ವದ ಬಂದ ವಕ್ಫ್ ಬೋರ್ಡ್ ನಡಿ ದೇಶದ ಬಹುಪಾಲ ಭೂಮಿ ಇದ್ದು, ದೇಶವನ್ನಾಳಿದ ಸರಕಾರಗಳ ನೀತಿಯೇ ಇದಕ್ಕೆ ಕಾರಣ ಎಂದು ದೂರಿದರು.
ಹಿಂದೂ ಜನ ಜಾಗೃತಿ ಸಮಿತಿ ಆನಂದ ರವರು ಮಾತನಾಡಿ ಜಗತ್ತಿನಾದ್ಯಂತ ಮುಸಲ್ಮಾನ ಧರ್ಮದವರ ಒಂದು ಘೋಷಣೆಯು ನಿಶ್ಚಿತವಾಗಿದೆ, ಅದೆಂದರೆ ‘ಇಸ್ಲಾಮ್ ಖತರೆಮೆಂ ಹೈ’ (ಇಸ್ಲಾಂ ಅಪಾಯದಲ್ಲಿದೆ). ಈ ಘೋಷಣೆಯ ಮೂಲಕ ಮೂಲಭೂತವಾದದ ಪ್ರಸಾರವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಅದರಂತೆ ದೇಶಾದ್ಯಂತದ ಮದರಸಾಗಳಲ್ಲಿಯೂ ಮತಾಂಧತೆಯನ್ನು ಹೆಚ್ಚಾಗಿ ಕಲಿಸು ವುದು ಆಗಾಗ ಎದುರು ಬಂದಿದೆ. ಅಂದರೆ ‘ಪಿ.ಎಫ್.ಐ.’ನಂತಹ ಮೂಲಭೂತವಾದಿ ಗುಂಪುಗಳನ್ನು ಬಗ್ಗುಬಡಿಯುವ ಪ್ರಕ್ರಿಯೆ ಆರಂಭಿಸಿರುವುದು ಸದ್ಯ ಕಂಡು ಬರುತ್ತಿದೆ; ಆದರೆ ಈ ಮೂಲಭೂತವಾದಕ್ಕಾಗಿ ಹಣದ ಪೂರೈಕೆಯನ್ನು ತಡೆಗಟ್ಟುವುದು ಸಹ ಒಂದು ದೊಡ್ಡ ಸವಾಲಾಗಿದೆ. ಅದರೊಂದಿಗೆ ಮೂಲಭೂತವಾದಿಗಳ ಬಳಿಯಿರುವ ಸ್ಥಿರಾಸ್ತಿ, ‘ವಕ್ಫ್’ ಕಾನೂನಿಯ ದುರ್ಬಳಕೆಯನ್ನು ತಡೆಗಟ್ಟುವ ಅವಶ್ಯಕತೆಯೂ ಇದೆ; ಏಕೆಂದರೆ ‘ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ ಎಂದು ಹೇಳಿದರು.
ಆಂದೋಲನದಲ್ಲಿ ಲಕ್ಮಣ ಗೌಡ ಬೆಳ್ಳಪ್ಪಾಡಿ ಮಾಜಿ ತಾಲೂಕು ಪಂಚಾಯತ್ ಸದಸ್ಯ, ಮಾಧವ ರೈ ಕುಂಬ್ರ.ಕುಂಬ್ತ ವರ್ತಕರ ಸಂಘದ ಅಧ್ಯಕ್ಷರು, ಶ್ರೀ ಗಣೇಶ ನಾಯಕ್ ನಮ್ಮೂರು ನಮ್ಮವರ ಸಂಘ ಮೈದನಡ್ಕ ಶ್ರೀ ವಿಠಲದಾಸ್ ಹಾರಡಿ ಬಿ.ಜೆ.ಪಿ.ವಾರ್ಡ್ ಅದ್ಯಕ್ಷ ರು ಹಾರದಿ ಇವರು ಉಪಸ್ಥಿತಿ ಇದ್ದರು.