ಸೆ.30 ರಂದು ಉಜಿರೆಯಲ್ಲಿ ಓಷನ್ ಪರ್ಲ್ ಹೋಟೆಲ್ ಆರಂಭ


ಉಜಿರೆ: ಗುಣಮಟ್ಟದ ಆಹಾರ ಮತ್ತು ಉತ್ಕೃಷ್ಟ ಸೇವೆಗಳಿಂದ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಓಷನ್ ಪರ್ಲ್ ಹೋಟೆಲ್ ಸೆ.30ರಂದು ಉಜಿರೆಯಲ್ಲಿ ಉದ್ಘಾಟನೆಗೊಳ್ಳಲಿದೆ.
ಉಜಿರೆ ಎಸ್ ಡಿಎಂ ಕಾನೂನು ಕಾಲೇಜಿನ ಸಮೀಪದಲ್ಲಿ ಆರಂಭಗೊಳ್ಳಲಿರುವ ಈ ಹೊಟೇಲ್ ನಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಗಳಿರಲಿವೆ. ಒಂದು ಪ್ರೆಸಿಡೆನ್ಸಿಯಲ್ ಸೂಟ್ ರೂಂ, ಮೂರು ಸೂಟ್ ರೂಂ ಸಹಿತ ಒಟ್ಟು 36 ಸುಸಜ್ಜಿತ ರೂಂ ಗಳಿವೆ. ಸಭೆ ಸಮಾರಂಭಗಳಿಗಾಗಿ 1 ಬ್ಯಾಂಕ್ವೆಟ್ ಹಾಲ್ ವ್ಯವಸ್ಥೆಯೂ ಇಲ್ಲಿದೆ.
ಹೆಸರಾಂತ ಉದ್ಯಮಿ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವೀಸ್ ಸಂಸ್ಥೆಯ ನಿರ್ದೇಶಕರಾದ ಶಶಿಧರ್ ಶೆಟ್ಟಿ ಹೋಟೆಲ್ ನ ಪ್ರವರ್ತಕರಾಗಿದ್ದಾರೆ. ಅವರು ತನ್ನ ತಾಯಿ ಕಾಶಿಶೆಟ್ಟಿಯವರ ಹೆಸರಿನಲ್ಲಿ ನಿರ್ಮಿಸಿರುವ ಕಾಶಿ ಪ್ಯಾಲೆಸ್ ಕಟ್ಟಡದಲ್ಲಿ ಹೋಟೆಲ್ ಆರಂಭಗೊಳ್ಳಲಿದೆ. ಓಷನ್ ಪರ್ಲ್ ಆಡಳಿತ ಮಂಡಳಿ ಹೋಟೆಲ್ ನಿರ್ವಹಣೆ ಮಾಡಲಿದೆ.
ಹೋಟೆಲ್ ಉದ್ಯಮವನ್ನು ನಾವು ವ್ಯವಹಾರದ ಬದಲಾಗಿ ಸೇವೆ ಎಂದು ಪರಿಗಣಿಸಿದ್ದೇವೆ. ಗ್ರಾಹಕರ ಪ್ರೀತಿ ಮತ್ತು ವಿಶ್ವಾಸ ನಮ್ಮ ಯಶಸ್ಸಿನ ಹಿಂದಿದೆ. ಗ್ರಾಹಕರ ಆದ್ಯತೆಗಳಿಗೆ ನಾವು ಸ್ಪಮದಿಸುತ್ತೇವೆ. ಗುಣಮಟ್ಟದ ಮತ್ತು ಶುಚಿ ರುಚಿಯಾದ ಆಹಾರಕ್ಕೆ ಆದ್ಯತೆ ನೀಡುತತಿದ್ದೇವೆ. ಈ ಪರಂಪರೆ ಉಜಿರೆ ಹೋಟೆಲ್ ನಲ್ಲೂ ಮುಮದುವರಿಯಲಿದೆ ಎಂದು ಓಷನ್ ಪರ್ಲ್ ಸಂಸ್ತೆಯ ಅಧ್ಯಕ್ಷ ಜಯರಾಮ್ ಬನಾನ್ ಮತ್ತು ಉಪಾಧ್ಯಕ್ಷ ಬಿ.ಎನ್ ಗಿರೀಶ್ ತಿಳಿಸಿದ್ದಾರೆ.