ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ನಡೆದ 3ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿಚಿನ್ನದ ಪದಕ ಗೆದ್ದ ಏನೆಕಲ್ಲಿನ ಅಕ್ಷಯ: ಆರಿಕೋಡಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಎಂದ ಬಾಲಕಿ
ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ನಡೆದ 3ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಏನೆಕಲ್ಲು (ಬಾಬ್ಲುಬೆಟ್ಟು) ಗ್ರಾಮದ ಮೋಹನ್ ಕುಮಾರ್ ಮತ್ತು ದಿವ್ಯ ಕುಮಾರಿ ದಂಪತಿಗಳ ಪುತ್ರಿಅಕ್ಷಯ ಬಾಬ್ಲುಬೆಟ್ಟು ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ.
2025ರ ಫೆಬ್ರವರಿ ತಿಂಗಳಲ್ಲಿ ದುಬೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ.
“ಆರಿಕೋಡಿ ಅಮ್ಮನ ಆಶೀರ್ವಾದ” ದಿಂದ ಈ ಸಾಧನೆ ಮಾಡಲಾಯಿತೆಂದು ಹೇಳಿಕೊಂಡಿದ್ದಾರೆ.