ಉಜಿರೆಯ ರಬ್ಬರ್ ಸೊಸೈಟಿಯಿಂದ ಮಾದರಿ ಸೇವಾಕಾರ್ಯ
ಬೆಳ್ತಂಗಡಿ ತಾಲೂಕು, ರಬ್ಬರ್ ಗ್ರೋವರ್ಸ್ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷರಾದ ಶ್ರೀಧರ್ ಬಿಢೆ, ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ, ಕಾರ್ಯನಿರ್ವಹಣಾಧಿಕಾರಿಯವರಾದ ರಾಜು ಶೆಟ್ಟಿ ಇವರ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ ನೀಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸೊಸೈಟಿಯಿಂದ ರೂ. 50,000 ದ ಚೆಕ್ ನೀಡಿ ಕಟ್ಟಡದ ನಿರ್ಮಾಣ ಶೀಘ್ರ ನೆರವೇರುವಂತೆ ಶುಭಹಾರೈಸಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು.