• December 8, 2024

ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ವತಿಯಿಂದ, ಕೆಸರು ಗದ್ದೆ ಕ್ರೀಡಾಕೂಟ

 ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ವತಿಯಿಂದ, ಕೆಸರು ಗದ್ದೆ ಕ್ರೀಡಾಕೂಟ

Oplus_131072

 

ಬೆಳಾಲು :ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 14 ನೆ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ನ 10 ರಂದು ಅನಂತೋಡಿಯ ಗದ್ದೆಯಲ್ಲಿ ಜರಗಿತು.ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಭಜನೆಯ ಮೆರವಣಿಗೆಯ ಮೂಲಕ ಸಾಗಿ ವೇದಿಕೆಯಲ್ಲಿ ದೀಪ ಪ್ರಜ್ವಲನೆ ಮೂಲಕ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ದೇವಳದ ಅರ್ಚಕರಾದ ಸಂಪತ್ ಕುಮಾರ್ ಇವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ವೇದಿಕೆಯಲ್ಲಿ ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಾಧ್ಯಕ್ಷರಾದ ಸುಮಿತ್ ಆಚಾರ್ಯ ಇವರು ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಪೂಜಾರಿ ಮಾಗಣೆಗುತ್ತು ಬನಂದೂರು, ಹೇಮಾ ಮೋಹನ್ ಅನರ್ಘ್ಯ ವಚ್ಛ, ಸುಂದರ ನೀರಕಟ್ಟೆ,ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ದೇವಸ್ಥಾನ ವ್ಯವಸ್ಥಾಪಪ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ಗೌಡ , ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ , ವಿಶ್ವನಾಥ ಪೂಜಾರಿ ಬಾಯ್ತರಡ್ಡ ಅಧ್ಯಕ್ಷರು ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಬಾಯ್ತರಡ್ದ, ಕಾರ್ಯದರ್ಶಿ ಪದ್ಮನಾಭ ಅನಂತೋಡಿ, ವಿಘ್ನೇಶ್ ಅನಂತೋಡಿ ಉಪಸ್ಥಿತರಿದ್ದರು. ಕಿರಣ್ ಸುವರ್ಣ ಸ್ವಾಗತಿಸಿ, ನವನೀತ್ ಏರ್ದೊಟ್ಟು ಧನ್ಯವಾದವಿತ್ತರು, ಗಿರೀಶ್ ಮಂಜೊತ್ತು ಇವರು ಕಾರ್ಯಕ್ರಮ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!