• December 8, 2024

ಬನ್ನೂರು: ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ

 ಬನ್ನೂರು: ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ

Oplus_131072

 

ಬನ್ನೂರು : ದಿನಾಂಕ 10/11/2024 ನೇ ಭಾನುವಾರ ದ. ಕ. ಜಿ. ಪ. ಹಿ. ಪ್ರಾ. ಶಾಲೆ, ಬನ್ನೂರು ಇಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಪುತ್ತೂರು ಒಕ್ಕೂಟದ ಸಹಭಾಗಿತ್ವದಲ್ಲಿ ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿಷ್ಣುಪ್ರದೀಪ. ಎನ್,ಉಪನ್ಯಾಸಕರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ,ಪುತ್ತೂರು ಇವರು ಯುವ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ *ಮನೆ ನಿರ್ವಹಣೆಯಲ್ಲಿ ನೈಪುಣ್ಯತೆ ಮತ್ತು ಕಲಾತ್ಮಕತೆ* ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಲೆಕ್ಕ ಪರಿಶೋಧಕರಾದ ಕು.ಲತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಸ್ವಸಹಾಯ ಸಂಘದ ಉಪಾಧ್ಯಕ್ಷರಾದ ರವಿಚಂದ್ರ ಗೌಡ ಹಾಗೂ ಸಂಘದ ಜೊತೆ ಕಾರ್ಯದರ್ಶಿಯಾದ ಚಂದ್ರಕಲಾ ಇವರು ಉಪಸ್ಥಿತರಿದ್ದರು.ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ವೀಕ್ಷಾ. ಎಸ್(ತಂಡದ ನಾಯಕಿ), ಶ್ರೀ ಅಭಿರಾಮ ಶರ್ಮ(ತಂಡದ ಮೇಲ್ವಿಚಾರಕರು), ಕು.ಸ್ವರ್ಣಶ್ರೀ, ಕು.ವರ್ಷ. ಬಿ, ಶ್ರೀ ರಮೇಶ್, ಶ್ರೀ ವಲೇಶ್ ನಾಯಕ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!