ಕನ್ಯಾಡಿ ಶಾಲೆಗೆ ಖಾಯಂ ಮುಖ್ಯೋಪಾಧ್ಯಾಯರು ಮತ್ತು ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜಾ ರಿಗೆ ಮನವಿ.
250 ಕ್ಕೂ ಹೆಚ್ಚು ಮಕ್ಕಳು ಇರುವ ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಕನ್ಯಾಡಿ ಶಾಲೆಗೆ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರನ್ನು ಒದಗಿಸುವಂತೆ ಬೆಳ್ತಂಗಡಿ ತಾಲೂಕಿನ ಮಾನ್ಯ ಶಾಸಕ ಹರೀಶ್ ಪೂಂಜಾ ರವರಿಗೆ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ ಇದರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ರಾವ್ ಪಿ,ಅವಿನಾಶ್ ಶೆಟ್ಟಿ,ಗಣೇಶ್ ಗೌಡ ಬಜಿಲ,ರಾಘವ ಕುರ್ಮಾನಿ,ಸಚಿನ್ ಗೌಡ,ಅರುಣ್ ನಾಯ್ಕ್,ದಿವಾಕರ್ ಪೂಜಾರಿ ನೀರಚಿಲುಮೆ, ಸುದರ್ಶನ್ ಕೆ.ವಿ ಕನ್ಯಾಡಿ, ವಿದ್ಯಾಧರ್ ರೈ ಪಜಿರಡ್ಕ,ಗಂಗಾಧರ್ ಬಜಿಲ,ರಾಧೇಶ್ ಗೌಡ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.