• July 16, 2024

ಪಿಯುಸಿ ಯಲ್ಲಿ ಸೇಮ್ ಸೇಮ್ ಮಾರ್ಕ್ಸ್ ತೆಗೆದ ಅವಳಿ ಸಹೋದರಿಯರು!

 ಪಿಯುಸಿ ಯಲ್ಲಿ ಸೇಮ್ ಸೇಮ್ ಮಾರ್ಕ್ಸ್ ತೆಗೆದ ಅವಳಿ ಸಹೋದರಿಯರು!

ಎಸ್‌ಎಸ್‌ಎಲ್‌ಸಿಯಲ್ಲಿ ಸಮಾನ‌ ಅಂಕ ಪಡೆದು ಅಚ್ಚರಿ ಮೂಡಿಸಿದ್ದ ಹಾಸನದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿಯಲ್ಲೂ ಮತ್ತೆ ಸಮಾನ ಅಂಕ‌ ಪಡೆಯುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಉಪ ನಿರ್ದೇಶಕ ವಿನೋದ್ ಚಂದ್ರ ಹಾಗೂ ಕನ್ನಿಕಾ ದಂಪತಿಗಳ ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ ಸಹೋದರಿಯರು ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 620 ಸಮಾನ ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅವಳಿಗಳಾಗಿ ಅಚ್ಚರಿ ಮೂಡಿಸಿದ್ದರು.

ಇದೀಗ ಎರಡು ವರ್ಷಗಳ ಬಳಿಕ ಮತ್ತೊಂದು ಅಚ್ಚರಿ ಹಾಗೂ ಬೆರಗು ಮೂಡಿಸುವ ಫಲಿತಾಂಶ ನೀಡಿ ಜಿಲ್ಲೆಯ ಜನರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ಸೈನ್ಸ್‌ನಲ್ಲಿ 571 .(ಶೇ 95.17%) ಗಳಿಸಿ ಇಲ್ಲಿಯೂ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಮಕ್ಕಳ ಸಾಧನೆ ಬಗ್ಗೆ ಸಂತಸ ಹಂಚಿಕೊಂಡಿರುವ ಪೋಷಕರು ‌ಅವಳಿ ಪುತ್ರಿಯರ ಈ ಸಮಾನ ಅಂಕದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಾಸನ ಜಿಲ್ಲೆಯ ಜನರೂ ಕೂಡ ಅವಳಿ ಮಕ್ಕಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!