ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 8 ರಿಂದ 17 ರವರೆಗೆ ಬ್ರಹ್ಮಕಲಶೋತ್ಸವ:ಕ್ಷೇತ್ರಕ್ಕೆ ಮಾಣಿಲದ ಮೋಹನದಾಸ ಸ್ವಾಮೀಜಿ ಭೇಟಿ
ಬೆಳ್ತಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 8ರಿಂದ 17ರ ವರೆಗೆ ಬ್ರಹ್ಮಕಲಶೋತ್ಸವ ಹಾಗೂ ಜಾತ್ರಾಮಹೋತ್ಸವವು ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರಗಲಿದ್ದು,,ವಿವಿಧ ಕಾಮಗಾರಿಗಳು ಹಾಗೂ ಪೂರ್ವಸಿದ್ದತೆಗಳು ಭರದಿಂದ ಸಾಗುತ್ತಿವೆ
ಕ್ಷೇತ್ರಕ್ಕೆ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಎ 1 ಸೋಮವಾರ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ.ಎಸ್ ಗಂಗಾಧರ ರಾವ್ ಕೆವುಡೇಲು, ಸಂಪತ್ ಸುವರ್ಣ.ರಾಜ್ ಪ್ರಕಾಶ್ ಪಡ್ಡೈಲು. ಹಾಗೂ ಇತರರು ಉಪಸ್ಥಿತರಿದ್ದರು.
ಈಗಾಗಲೇ ಅಲಂಕಾರ ಹಾಗೂ ಚಪ್ಪರ ಸಮಿತಿಯವರು ಚಪ್ಪರ ಸೇರಿದಂತೆ ನಗರಲಂಕಾರದ ಸಿದ್ಧತೆ ಪ್ರಾರಂಭಿಸಿದ್ದು ದಿನಂಪ್ರತಿ ನೂರಾರು ಸ್ವಯಂ ಸೇವಕರು ಶ್ರಮದಾನದಲ್ಲಿ ಭಾಗವಹಿಸುತಿದ್ದಾರೆ.