ಕನ್ಯಾಡಿ: ಚಾತುರ್ಮಾಸ್ಯ ವೃತ ಕಾರ್ಯಕ್ರಮದಲ್ಲಿ ಸುಲ್ಕೇರಿ ಮೊಗರು ಮತ್ತು ಶಿಶಿಲ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ
ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆರಂಭಗೊಂಡಿದ್ದು ಜು.15 ರಂದು ಮಹಿಷಮರ್ಧಿನಿ ಭಜನಾ ಮಂಡಳಿ ಸುಲ್ಕೇರಿಮೊಗರು ಮತ್ತು ಶ್ರೀ ರಾಮಾಂಜನೇಯ ಭಜನಾ ಮಂಡಳಿ ಶಿಶಿಲ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸುಲ್ಕೇರಿಮೊಗರು ಗ್ರಾಮಸ್ಥರು, ಶಿಶಿಲದ ಗ್ರಾಮಸ್ಥರು, ಹಾಗೂ ಹಲವಾರು ಗಣ್ಯರು ಭಾಗಿಯಾಗಿದ್ದರು.