• October 16, 2024

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನದ ಮಹತ್ವದ ಕುರಿತು ಸಂಶೋಧನೆಯ ಮಂಡನೆ !

 ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನದ ಮಹತ್ವದ ಕುರಿತು ಸಂಶೋಧನೆಯ ಮಂಡನೆ !

 

“ಸಾತ್ತ್ವಿಕ ಪ್ರವೃತ್ತಿಯ ಜನರು ಸಕಾರಾತ್ಮಕ ಸೂಕ್ಷ್ಮ ಸ್ಪಂದನಗಳ ನಿರ್ಮಾಣ ಮಾಡುತ್ತಾರೆ, ಉತ್ತಮ ಗುಣಮಟ್ಟದ ವಿಚಾರ ಮಾಡುತ್ತಾರೆ ಮತ್ತು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ. ತದ್ವಿರುದ್ಧ ತಾಮಸಿಕ ಪ್ರವೃತ್ತಿಯ ಜನರಲ್ಲಿ ವ್ಯಕ್ತಿತ್ವದಲ್ಲಿನ ದೋಷ ಹೆಚ್ಚಿರುತ್ತದೆ ಮತ್ತು ಅವರ ಮನಸ್ಸಿನಲ್ಲಿ ಕಡಿಮೆ ಗುಣಮಟ್ಟದ ವಿಚಾರಗಳಿರುತ್ತವೆ. ಇದರಿಂದ ಅವರಲ್ಲಿ ನಕಾರಾತ್ಮಕ ಸೂಕ್ಷ್ಮ ಸ್ಪಂದನಗಳು ಮತ್ತು ಒತ್ತಡ ನಿರ್ಮಾಣವಾಗುತ್ತದೆ, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು.

ಇತ್ತೀಚಿಗೆ ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ನಡೆದ ‘ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಹ್ಯಾಪಿನೆಸ್ ಅಂಡ್ ವೆಲ್ ಬೀಯಿಂಗ್ (ICHW 2024)’ ನ ಸಭೆಯಲ್ಲಿ ಕ್ಲಾರ್ಕ್ ಇವರು ಮಾತನಾಡುತ್ತಿದ್ದರು.

ಅವರು ‘ಸೂಕ್ಷ್ಮ ಸಕಾರಾತ್ಮಕ ಸ್ಪಂದನಗಳು ಆನಂದವನ್ನು ಹೇಗೆ ನೀಡುತ್ತವೆ’ ಈ ಶೋಧಪ್ರಬಂಧ ಮಂಡಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದು ಶ್ರೀ. ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ .

ಅಕ್ಟೋಬರ್ 2016 ರಿಂದ ಫೆಬ್ರವರಿ 2024 ಈ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ 21 ನೇ ರಾಷ್ಟ್ರೀಯ ಮತ್ತು 92 ಅಂತರಾಷ್ಟ್ರೀಯ, ಹೀಗೆ ಒಟ್ಟು 113 ವೈಜ್ಞಾನಿಕ ಪರಿಷತ್ತಿನಲ್ಲಿ ಶೋಧ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇದರಲ್ಲಿ 14 ಅಂತರಾಷ್ಟ್ರೀಯ ಪರಿಷತ್ತಿನಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತೀಕರಣ’ ಪ್ರಶಸ್ತಿ ಪಡೆದಿದ್ದಾರೆ.

ಶಾನ್ ಕ್ಲಾರ್ಕ್ ಇವರ ಸೂಕ್ಷ್ಮ ಸ್ಪಂದನಗಳು ವ್ಯಕ್ತಿಯ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಹೇಗೆ ಬೀರುತ್ತವೆ, ಇದರ ಅಧ್ಯಯನ ನಡೆಸುವ ಕೆಲವು ಪರೀಕ್ಷೆಗಳನ್ನು ಪ್ರಸ್ತುತಪಡಿಸಿದರು. ಮೊದಲ ಪರೀಕ್ಷೆಯಲ್ಲಿ, ವ್ಯಕ್ತಿ ಮದ್ಯ ಸೇವನೆ ಮಾಡಿದ ನಂತರ ಅವರಲ್ಲಿನ ನಕಾರಾತ್ಮಕತೆ ಹೆಚ್ಚಾಗಿ ಸಕಾರಾತ್ಮಕತೆ ಕೇವಲ 5 ನಿಮಿಷದಲ್ಲಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಔರಾ ಸ್ಕ್ಯಾನರ್ ನಿಂದ ನಡೆಸಿದ ಪರೀಕ್ಷಣೆಯಲ್ಲಿ ಗಮನಕ್ಕೆ ಬಂತು. ತದ್ವಿರುದ್ಧ ಎಳನೀರಿನಂತಹ ಸಾತ್ತ್ವಿಕ ಪೇಯ ಕುಡಿದ ನಂತರ ವ್ಯಕ್ತಿಯ ಪ್ರಭಾವಲಯದ ಮೇಲೆ ತಕ್ಷಣ ಸಕಾರಾತ್ಮಕ ಪರಿಣಾಮವಾಯಿತು.


ಎರಡನೇ ಹಂತದ ಪರೀಕ್ಷೆಯಲ್ಲಿ ರೋಗಪೀಡಿತ ಅವಯವದಿಂದ ನಕಾರಾತ್ಮಕ ಸ್ಪಂದನಗಳು ಹೇಗೆ ಪ್ರಕ್ಷೇಪಿತವಾಗುತ್ತವೆ, ಎಂದು ತಿಳಿದು ಬಂತು. ಬಾಲ್ಯದಿಂದಲೇ ಚರ್ಮರೋಗ (Eczema) ಪೀಡಿತ ಇರುವ ವ್ಯಕ್ತಿಯ ಮುಖದಿಂದ ಪ್ರಕ್ಷೇಪಿತವಾಗುವ ನಕಾರಾತ್ಮಕ ಪ್ರಭಾವಲಯ ಕೇವಲ ಆಧ್ಯಾತ್ಮಿಕ ಉಪಚಾರ ಮಾಡಿದ ನಂತರ ಹೇಗೆ ಗಣನೀಯವಾಗಿ ಕಡಿಮೆ ಆಯಿತು, ಎಂದು ಸಹ ಅವರು ಈ ಪರೀಕ್ಷೆಯಲ್ಲಿ ಸ್ಪಷ್ಟಪಡಿಸಿದರು.
ಮೂರನೇ ಹಂತದಲ್ಲಿ, 22 ಕ್ಯಾರೆಟ್ ಚಿನ್ನದಿಂದ ತಯಾರಿಸಿರುವ 2 ಬೇರೆ ಬೇರೆ ಕುಸರಿ(ಡಿಸೈನ್) ಇರುವ ಆಭರಣದಿಂದ ಸೂಕ್ಷ್ಮ ಸ್ಪಂದನದ ದೃಷ್ಟಿಯಿಂದ ತುಲನೆ ಮಾಡಿದರು. ಎರಡು ಸರಗಳು ಚಿನ್ನದ್ದೇ ಆಗಿದ್ದರೂ, ಸಾತ್ತ್ವಿಕ ಕುಸರಿ ಇರುವ ಚಿನ್ನದ ಸರದಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತದೆ, ತದ್ವಿರುದ್ಧ ತಾಮಸಿಕ ಕುಸರಿಯ ಸರದಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತದೆ, ಹೀಗೆ ಕಂಡು ಬಂತು. ಕೊನೆಗೆ ಶ್ರೀ. ಕ್ಲಾರ್ಕ್ ಇವರು ಹೆವಿ ಮೆಟಲ್ ನಂತಹ ಸಂಗೀತ ಕೇಳುವುದು ಮತ್ತು ಹಾರರ್ ಚಲನಚಿತ್ರ ನೋಡುವುದು ಈ ರೀತಿಯ ಮನೋರಂಜನೆಯಲ್ಲಿ ಮುಳಗಿರುವ ವ್ಯಕ್ತಿಯ ಪ್ರಭಾವಲಯದಲ್ಲಿನ ಸಕಾರಾತ್ಮಕತೆ ಸಂಪೂರ್ಣವಾಗಿ ನಾಶವಾಗಬಹುದು. ಹಾಗೂ ಕಪ್ಪು ಬಣ್ಣ ಎಲ್ಲಕ್ಕಿಂತ ಹೆಚ್ಚು ತಾಮಸಿಕವಾಗಿರುವುದರಿಂದ ಕಪ್ಪು ಬಟ್ಟೆ ಧರಿಸಿದರೆ ನಕಾರಾತ್ಮಕತೆ ಹೆಚ್ಚು ಪ್ರಮಾಣದಲ್ಲಿ ಗ್ರಹಿಸುತ್ತದೆ ಎಂದು ತಿಳಿಸಿದರು.


ಈ ಎಲ್ಲಾ ಪರೀಕ್ಷೆಯ ನಿರೀಕ್ಷಣೆಯಿಂದ ಶ್ರೀ. ಕ್ಲಾರ್ಕ್ ಇವರು ನಿಷ್ಕರ್ಷ ಮಂಡಿಸುತ್ತಾ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ನಾಮಜಪ ಮಾಡುವುದು ಮತ್ತು ಆಧ್ಯಾತ್ಮಿಕ ಉಪಾಯ ಪದ್ಧತಿ, ಉದಾಹರಣೆಗೆ, ಉಪ್ಪು ನೀರಿನಲ್ಲಿ 15 ನಿಮಿಷ ಕಾಲು ಇಟ್ಟು ಉಪಾಯ ಮಾಡುವುದು, ಇಂತಹ ಕೃತಿಗಳು ವ್ಯಕ್ತಿಯ ಪ್ರಭಾವಲಯದಲ್ಲಿನ ಸಕಾರಾತ್ಮಕತೆ ಹೆಚ್ಚಿಸುತ್ತದೆ ಮತ್ತು ಮನಸ್ಸಿನಲ್ಲಿ ಒಳ್ಳೆಯ ಗುಣಮಟ್ಟದ ವಿಚಾರ ಬರುವುದಕ್ಕೆ ಅತ್ಯಂತ ಪ್ರಭಾವಿ ಮಾರ್ಗವಾಗಿದೆ ಎಂದರು.

Related post

Leave a Reply

Your email address will not be published. Required fields are marked *

error: Content is protected !!