ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಉಜಿರೆ ಒಂಬತ್ತನೇ ವರ್ಷದ ಮೊಸರು ಕುಡಿಕೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮ
ಮೈತ್ರಿ ಫ್ರೆಂಡ್ಸ್ ಕ್ಲಬ್ ಗಾಂಧಿನಗರ ಉಜಿರೆ ಒಂಬತ್ತನೇ ವರ್ಷದ ಮೊಸರು ಕುಡಿಕೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಉಜಿರೆ ಗಾಂಧಿನಗರ ಶಾಲಾ ಮೈದಾನದಲ್ಲಿ ಆದಿತ್ಯವಾರ ಜರುಗಿತು.
ಕ್ರೀಡಾಕೂಟದ ಉದ್ಘಾಟನೆಯನ್ನು ಎಸ್.ಪಿ ಆಯಿಲ್ ಮಿಲ್ ನ ಮಾಲಕರಾದ ಶಿವಕಾಂತ ಗೌಡ ಇವರು ನೆರವೇರಿಸಿದರು . ಕ್ರೀಡಾ ಕೂಟದಲ್ಲಿ ಸಾರ್ವಜನಿಕರಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು .
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಈ ಕ್ರೀಡಾಕೂಟದಲ್ಲಿ ಎಲ್ಲಾ ಜಾತಿ , ಧರ್ಮದವರು ಯಾವುದೇ ಬೇಧಭಾವ ಇಲ್ಲದೆ ಭಾಗವಹಿಸುವ ಮೂಲಕ ಸೌಹಾರ್ದತೆಯನ್ನು ಎತ್ತಿ ಹಿಡಿಯಲಾಗಿದೆ. ಈ ಕ್ರೀಡಾಕೂಟ ಇತರರಿಗೆ ಮಾದರಿಯಾಗಿದೆ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು ಶಿಕ್ಷಣ ಮತ್ತು ಸಂಘಟನೆಯಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ವೇದಿಕೆಯಲ್ಲಿ ಅಲೇರಿ ಕಾನದ ಕಟದ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಿ.ಎಸ್ , ಯುವ ಉದ್ಯಮಿ ಪ್ರವೀಣ್ ಫೆರ್ನಾಂಡಿಸ್ , ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಶಾರೀರಿಕ ಶಿಕ್ಷಕರಾದ ಸಂಜೀವ ಕೆ , ಸುಕೀರ್ತಿ ಜೈನ್ , ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷ ಶ್ರೀನಿವಾಸ್ , ಉಜಿರೆ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ನಾಗೇಶ್ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ದಿನೇಶ್ ವಹಿಸಿದ್ದರು . ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪ ಶೆಟ್ಟಿ , ಉಪಾಧ್ಯಕ್ಷ ರವಿ ಬರೆಮೇಲು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ರೀಡಾಕೂಟದಲ್ಲಿ ಧನಸಂಗ್ರಾಹ : ಕ್ರೀಡಾಕೂಟದಲ್ಲಿ ಕ್ಯಾನ್ಸರ್ ಪೀಡಿತ 6ನೇ ತರಗತಿಯ ಇಂದಬೆಟ್ಟು ಪರಿಸರದ ನಿಖಿತಾ ಎಂಬ ವಿಧ್ಯಾರ್ಥಿನಿಗೆ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಧನ ಸಂಗ್ರಹವನ್ನು ಮಾಡುವ ಮೂಲಕ ಮಾನವೀಯತೆಯನ್ನು ಸಾರಲಾಯಿತು.