• September 12, 2024

ಕಣಿಯೂರು ಗ್ರಾಮದಲ್ಲಿ ಆನೆ ದಾಳಿ: ಅಪಾರ ಕೃಷಿ ಹಾನಿ

 ಕಣಿಯೂರು ಗ್ರಾಮದಲ್ಲಿ ಆನೆ ದಾಳಿ: ಅಪಾರ ಕೃಷಿ ಹಾನಿ

ಬೆಳ್ತಂಗಡಿ: ಕಣಿಯೂರು ಅಲೆಕ್ಕಿ ಕುಕ್ಕುಂಜಾ ಕುರಿಯಡಿ ಹಾಗೂ ಪದ್ಮುಂಜ ಬಳಿ ಪದ್ಮುಂಜ ಕ್ವಾಟ್ರಾಸ್ ಬಳಿ ನೆನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಆನೆ ದಾಳಿ ನಡೆಸಿದ್ದು, ಹಲವಾರು ಕಡೆ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

ಕಣಿಯೂರು ಗ್ರಾಮಕ್ಕೆ ಸಂಬಂಧಪಟ್ಟ ಸ್ಥಳವಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ರಾತ್ರಿ ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದು ಯಾವ ಕಡೆ ಆನೆ ಚಲಿಸಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ನಾರಾಯಣ ಗೌಡ ಕುಕ್ಕುಂಜಾ, ಬಾಲಕೃಷ್ಣ ಗೌಡ ಕುರಿಯಾಡಿ, ಯಶೋಧ ನಾಯ್ಕ ಕೇರಿಕಟ್ಟೆ, ರಮೇಶ್ ಮೂಲ್ಯ ಕೇರಿಕಟ್ಟೆ, ಚಂದಪ್ಪ ಅಲೆಕ್ಕಿ ಇವರ ಕೃಷಿಗೆ ಆನೆ ದಾಳಿ ಮಾಡಿ ಅಪಾರ ನಷ್ಟ ಉಂಟಾಗಿದೆ.

Related post

Leave a Reply

Your email address will not be published. Required fields are marked *

error: Content is protected !!