ಶ್ರೀ ದುರ್ಗಾ ಭಜನಾ ಮಂದಿರ ಕನ್ನಾಜೆಯಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠೆಯ ಸಂಭ್ರಮ

ಶ್ರೀ ರಾಮಲಲ್ಲಾನ ಪ್ರತಿಷ್ಠೆಯ ಸಂಭ್ರಮವನ್ನು ಶ್ರೀ ದುರ್ಗಾ ಭಜನಾ ಮಂದಿರ ಕನ್ನಾಜೆಯಲ್ಲಿ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು.
ಕಲಾವಿದೆಯಾದ ಸುರಕ್ಷಾ ಆಚಾರ್ಯ ಇವರ ಕೈ ಚಳಕದಲ್ಲಿ ಮೂಡಿಬಂದ ಶ್ರೀ ರಾಮ ಮಂದಿರ 3000 ಹಣತೆಗಳ ಮೂಲಕ ದೀಪಾಲಂಕೃತಗೊಂಡು ಅತ್ಯಂತ ಸುಂದರವಾಗಿ ಮೂಡಿಬಂದಿತ್ತು.
ಶಾಸಕರಾದ ಶ್ರೀಯುತ ಹರೀಶ್ ಪೂಂಜ ಮತ್ತು ಕರಸೇವಕರಾದ ಶ್ರೀ ಕೋದಂಡರಾಮ ಪ್ರಭು ಮತ್ತು ಶ್ರೀ ಚಂದ್ರಶೇಖರ್ ಆಚಾರ್ಯ ಇವರು ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು