ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿ ಗುರುವಾಯನಕೆರೆ ಸಾರ್ವಜನಿಕ ಪೂರ್ವಭಾವಿ ಸಭೆ
ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ, ರತ್ನಗಿರಿ ಯಲ್ಲಿ ಫೇಬ್ರವರಿ 27,28,29 ಮತ್ತು ಮಾರ್ಚ್ 1,2 ರಂದು ಜರುಗಲಿರುವ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಮಹೋತ್ಸವ ಕುರಿತು ಸಾರ್ವಜನಿಕ ಪೂರ್ವಭಾವಿ ಸಭೆ ಕರೆಯಲಾಯಿತು ಹಾಗೂ ಈ ಸಂದರ್ಭದಲ್ಲಿ ಮಹೋತ್ಸವದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷರಾದ ಶ್ರೀ ಸಂಪತ್. ಬಿ. ಸುವರ್ಣ ರವರು ಮಾತನಾಡುತ ವಿವಿಧ ಸಮಿತಿಯ ಸಂಚಾಲಕರುಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿದಲ್ಲಿ ಈ ಪ್ರತಿಷ್ಠಾ ಮಹೋತ್ಸವನ್ನು ಯಶಸ್ವಿ ಕಾಣಲು ಅಭಿಪ್ರಾಯಪಟ್ಟರು.
ಸಮಿತಿ ಯ ಕಾರ್ಯಧ್ಯಕ್ಷರಾದ ವಿಶ್ವೇಶ್ ಕಿಣಿಯವರು ವಿವಿಧ ಸಮಿತಿ ಯ ಸಂಚಾಲಕರ ಜವಾಬ್ದಾರಿಯನ್ನು ವಿವರಿಸಿದರು, ಈ ಸಂದರ್ಭದಲ್ಲಿ
ಉಪಾಧ್ಯಕ್ಷರಾದ ವಸಂತ ಗೌಡ, ವೆಂಕಟರಮಣ ಆಚಾರ್ಯ, ಅಜಿತ್ ಮೋಹನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾಮತ್, ಜೊತೆ ಕಾರ್ಯದರ್ಶಿ ಶರಣ್ ಕುಲಾಲ್ ಶಿವಾಜಿನಗರ, ಗೌರವ ಸಲಹೆಗಾರ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.