ಜ.24 ರಂದು ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ
ಗುರುವಾಯನಕೆರೆ: ಇಲ್ಲಿಯ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ ಕಾರ್ಯಕ್ರಮವು ಜ.24 ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಹೊರನಾಡು ಶ್ರೀ ಕ್ಷೇತ್ರ ಅನುವಂಶಿಕ ಆಡಳಿತ ಮೊಕ್ತೇ ಸರರು ಭೀಮೇಶ್ವರ ಜೋಶಿ ಶಿಲಾನ್ಯಾಸವನ್ನು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಲಕ್ಷ್ಮೀ ಗ್ರೂಪ್ ಸಂಸ್ಥೆಯ ಮಾಲಕ ಮೋಹನ್ ಕುಮಾರ್, ಎಕ್ಸೆಲ್ ಕಾಲೇಜಿನ ಚೇರ್ ಮೆನ್ ಸಮುಂತ್ ಕುಮಾರ್ ಜೈನ್, ಬದ್ಯಾರ್ ಪಂಚಮುಖಿ ಇಂಡಸ್ಟ್ರೀಸ್ ಮಾಲಕ ಬಾಲಕೃಷ್ಣ ಶೆಟ್ಟಿ ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.