• December 9, 2024

ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

 ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

 

ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಇಂದು ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ ಗ್ರಾಹಕರ ಸೇವೆ ಮತ್ತು ಸಂತೃಪ್ತಿಯಲ್ಲಿ ಮನೆಮಾತಾಗಿದೆ.

ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 7, 8 ಮತ್ತು 9ರಂದು ಗ್ರಾಹಕರು ಮುಳಿಯ ಜ್ಯುವೆಲ್ಸ್‌ನಲ್ಲಿ ಖರೀದಿಸುವ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂ.ಗಳನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲಾಗುವುದು.


ಗ್ರಾಹಕರು ಹೇಗೆ ಮುಖ್ಯವೋ ಹಾಗೆಯೇ ಸಂಸ್ಥಾಪಕರು ಕೂಡ ಮುಖ್ಯ. ಅವರ ಆಶಯಕ್ಕೆ ಅನುಗುಣವಾಗಿ ಸಂಸ್ಥೆಯನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ನಮ್ಮ ಧ್ಯೇಯ. ನಮ್ಮ ಲಾಭಾಂಶದಲ್ಲಿ ಒಂದು ಅಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ. ಆ ಮೂಲಕ ಅವರ ಸೇವಾ ಮನೋಭಾವವನ್ನು ಮುಂದುವ್ರರಿಸಲು ನಾವು ಬದ್್ದ ರಾಗಿದ್ದೇವೆ.

-ಮುಳಿಯ ಜ್ಯುವೆಲ್ಸ್ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.

ದಿವಂಗತ ಮುಳಿಯ ಕೇಶವ ಭಟ್ಟರು ಸ್ಥಾಪಿಸಿದ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಇಂದು ಬೃಹತ್ತಾಗಿ ಬೆಳೆದಿದೆ.

Related post

Leave a Reply

Your email address will not be published. Required fields are marked *

error: Content is protected !!