ಶ್ರೀ ಧ. ಮಂ. ಆ. ಮಾ ಶಾಲೆಯಲ್ಲಿ ಕನಕಜಯಂತಿ ಆಚರಣೆ
ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನಕ ಜಯಂತಿ ಆಚರಣೆಯನ್ನು ಆತ್ಯಂತ ಮಹತ್ವ ಪೂರ್ಣವಾಗಿ ಆಚರಿಸಲಾಯಿತು.
ಕನಕ ಜಯಂತಿ ಪ್ರಯುಕ್ತ ತನು ಸ್ಪಂದಿಸದವರ ಮನ ಸ್ಪಂದಿಸುವ ಕಾರ್ಯಕ್ರಮ ತುಡಿತ ಭಾಗ ಎರಡು , ದೊಂಡಲೆಯಲ್ಲಿರುವ ಕುಮಾರಿ ಭಾಗ್ಯಶ್ರೀ ಎಂಬವರ ಮನೆಗೆ ಭೇಟಿ ನೀಡಿ ಅವರ ಜನ್ಮದಿನದ ಆಚರಣೆಯೊಂದಿಗೆ ಅವರಿಗೆ ಬಿನ್ ಬ್ಯಾಗ್ ಅನ್ನು ವಿತರಿಸಲಾಯಿತು.
ಬೆಳ್ತಂಗಡಿ ತಾಲೂಕು ಇಂಡಿಯನ್ ರೆಡ್ ಕ್ರಾಸ್ ಇದರ ಸದಸ್ಯರಾದ ಶ್ರೀಯುತ ಶಿವಕುಮಾರ್ ಉಪಸ್ಥಿತರಿದ್ದರು. ಜೊತೆಗೆ ಕನಕ ದಾಸರ ಹಾಡುಗಳನ್ನು ಹಾಡಿ ಕನಕ ಜಯಂತಿ ಆಚರಸಲಾಯಿತು .
ಆ ಪ್ರಯುಕ್ತ ಶಾಲೆಯಲ್ಲಿ ಪ್ರತೀ ತರಗತಿಯಲ್ಲೂ ಸಹ ಕನಕದಾಸರ ಜೀವನ ಚರಿತ್ರೆ ಹಾಗೂ ಕನಕದಾಸರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಯಿತು.
ಕನಕದಾಸರ ಕೀರ್ತನೆಗಳನ್ನು ವಿದ್ಯಾರ್ಥಿಗಳು ಹಾಡಿ ಕನಕನಮನ ಸಲ್ಲಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಕನಕದಾಸರ ಕೀರ್ತನೆಗಳು ಹಾಗೂ ಆಧುನಿಕ ಪ್ರಪಂಚಕ್ಕೆ ಅವುಗಳ ಮಹತ್ವ ವಿವರಿಸಿದರು.ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಾಕ್ಷಿಗಳಾದರು.