• July 15, 2024

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

 ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ


ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಜೀವನ ಕೌಶಲ್ಯ ಕಾರ್ಯಾಗಾರವನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶಪಾಲರಾದ ಸುನಿಲ್ ಪಂಡಿತ್ ನೆರವೇರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಕಾರ್ಯಾಗಾರದ ಮಹತ್ವ ಹಾಗೂ ಉದ್ದೇಶವನ್ನು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶಪಾಲರಾದ ಶ್ರೀಯುತ ಸುನಿಲ್ ಪಂಡಿತ್ ರವರು ಜೀವನ ಕೌಶಲ ಗಳು ಮಾಹಿತಿಗಳು
ಸ್ನೇಹಿತರನ್ನು ಹೇಗೆ ಆಯ್ಕೆಮಾಡಬೇಕು, ಜೀವನದಲ್ಲಿ ಮೌಲ್ಯಗಳ ಮಹತ್ವ,ಗುಂಪು ಓದುವಿಕೆಯ ಮಹತ್ವ,ಓದುವ ಕೌಶಲ್ಯ ಹಾಗೂ ಹದಿಹರೆಯದ ಸಮಸ್ಯೆ ಹಾಗೂ ಹೊರಬರುವ ಉಪಾಯ ಇತ್ಯಾದಿಗಳನ್ನು ಕಥೆ,ವಿಡಿಯೋ,ಹಲವಾರು ಚಟುವಟಿಕೆ ಹಾಗೂ ನೈಜ ಉದಾಹರಣೆಗಳ ಮೂಲಕ ತಿಳಿಸಿದರು.

ಕುಮಾರಿ ಭಾರ್ಗವಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ
ಆಶಿತಾ ಸ್ವಾಗತಿಸಿ ಅಭಿಜ್ಞಾನ್ ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!