ಕುಕ್ಕುಂದೂರು ವಲಯ ಮಕ್ಕಳ ಶಿಬಿರಕ್ಕೆ ಚಾಲನೆ
ಕುಕ್ಕುಂದೂರು ವಲಯ ಮಕ್ಕಳ ಶಿಬಿರ ವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಬಾಡಿ ಯಲ್ಲಿ ಇಲ್ಲಿಯ ಮುಖ್ಯ ಶಿಕ್ಷಕರಾದ ಕೆ ಪ್ರೇಮ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
5 ದಿನದ ಮಕ್ಕಳ ಶಿಬಿರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಕುಕ್ಕುಂದೂರು ವಲಯದ ಒಕ್ಕೂಟ ಹಾಗೂ ಹಳೇವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ಜನನಿ ಮಿತ್ರ ಮಂಡಳಿ ವಾಂಟ್ರಯಿಪದವು , ಜೆಸಿಐ ಕಾರ್ಕಳ ರೂರಲ್ ಇದರ ಸಂಯಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದು ಪದವು ಪರಿಸರದ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವು ಒಕ್ಕೂಟದ ಅಧ್ಯಕ್ಷರಾದ ಸದಾನಂದ ಯಾನೆ ಮೋಹನ್ ರವರು ವಹಿಸಿದ್ದರು.
ಉದ್ಘಾಟನಾ ವೇದಿಕೆಯಲ್ಲಿ ಹಳೆ ವಿಧ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾದ ಸುರೇಶ್ ,ಜನನಿ ಮಿತ್ರ ಮಂಡಳಿ ಅಧ್ಯಕ್ಷರಾದ ಸದಾಶಿವ ನಕ್ರೆ, ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀನಿವಾಸ್, ಜೆಸಿಐ ಕಾರ್ಕಳ ಇಲ್ಲಿಯ ಮಂಜುನಾಥ್ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ವಲಯ ಮೇಲ್ವಿಚಾರಕ ರಾದ ಪ್ರಸಾದ್, ಸೇವಾ ಪ್ರತಿನಿಧಿ ಆಶಾ ಸದಸ್ಯರಾದ ದಯಾನಂದ , ರಾಜೇಶ್ ಆಚಾರ್ಯ, ದಿನೇಶ್, ಸುಗುಣ , ಸುಮಿತ್ರ ಉಪಸ್ಥಿತಿ ಇದ್ದರೂ 35 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಶಿಬಿರದ ಆರಂಭ ದಲ್ಲಿ ಕುಣಿತ ಭಜನೆ ತರಬೇತಿ ಯಾನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಶ್ರೀನಿವಾಸ್ ರವರು ಕಳಿಸಿದರು.