• September 13, 2024

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ ಅ.23 ರವರೆಗೆ ನವರಾತ್ರಿ ಮಹೋತ್ಸ: ಅ. 24 ರಂದು ಶ್ರೀ ಚಂಡಿಕಾಯಾಗ

 ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ ಅ.23 ರವರೆಗೆ ನವರಾತ್ರಿ ಮಹೋತ್ಸ: ಅ. 24 ರಂದು ಶ್ರೀ ಚಂಡಿಕಾಯಾಗ

ನಡ: ನಡ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ ಅ.23 ರವರೆಗೆ ನವರಾತ್ರಿ ಮಹೋತ್ಸವ ಹಾಗೂ ಅ.24 ರಂದು ದಶಮಿಯ ದಿನದಂದು ಶ್ರೀ ಚಂಡಿಕಾಯಾಗವು ಜರುಗಲಿದೆ.

ನವರಾತ್ರಿಯಂದು ಕ್ಷೇತ್ರದಲ್ಲಿ ಬೆಳಗ್ಗೆ 9 ರಿಂದ ಸೇವೆಗಳು, ಪ್ರತೀ ದಿನ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ 7 ರಿಂದ ಸೇವೆಗಳು, ರಾತ್ರಿ ಗಂಟೆ 8.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ 15 ರಂದು ಶ್ರೀ ಶಾರದಾ ಭಜನಾ ಮಂಡಳಿ ಪುದ್ದೊಟ್ಟು ಲಾಯಿಲ ಹಾಗೂ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದ ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದ್ದು, ದಿನಾಂಕ 16 ರಂದು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸುಳ್ಯೋಡಿ, ನಾವೂರ ಇವರಿಂದ ಭಜನಾ ಕಾರ್ಯಕ್ರಮ, ದಿನಾಂಕ 17 ರಂದು ಸರಸ್ವತಿ ಭಜನಾ ಮಂಢಳಿ ವಿವೇಕಾನಂದ ನಗರ ಲಾಯಿಲ ಇವರಿಂದ ಭಜನಾ ಕಾರ್ಯಕ್ರಮ, ದಿನಾಂಕ 18 ರಂದು ನಾದಪ್ರಿಯ ಭಜನಾ ಮಂಡಳಿ ಪಣಕಜೆ ಇವರಿಂದ ಭಜನಾ ಕಾರ್ಯಕ್ರಮ, ದಿನಾಂಕ 19 ರಂದು ಶ್ರೀ ದುರ್ಗಾ ಭಜನಾ ಮಂಡಳಿ ಕನ್ನಾಜೆ ಇವರಿಂದ ಭಜನಾ ಕಾರ್ಯಕ್ರಮ, ದಿನಾಂಕ 20 ರಂದು ಬೆಳಗ್ಗೆ ಗಂಟೆ 11 ರಿಂದ ತುಳಸಿ ವಸಂತ ಪಣಕಜೆ ಇವರಿಂದ ಸ್ಯಾಕ್ಸೋಫೋನ್ ವಾದನ ಸಂಜೆ 6.30 ರಿಂದ 7.30 ರವರೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.

ರಾತ್ರಿ ಗಂಟೆ 7 ರಿಂದ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದ ಧರ್ಮಸ್ಥಳ ಬಿ ಪ್ರಕಾಶ್ ದೇವಾಡಿಗ ಮತ್ತು ನಾಗಪ್ರಿಯ ಜ್ಞಾನಶ್ರೀ ಕುತ್ರೊಟ್ಟು ಇವರಿಂದ ಸ್ಯಾಕ್ಸೋಫೋನ್ ವಾದನ ದಿನಾಂಕ 21 ರಂದು ವೈಷ್ಣವಿ ವಿಘ್ನೇಶ್ ನಡ ಪೆರ್ಮಾಣು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ. ದಿನಾಂಕ 22 ರಂದು ಮೂಕಾಂಬಿಕಾ ಭಜನಾ ಮಂಡಳಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಭರತನಾಟ್ಯ ಕಾರ್ಯಕ್ರಮ ನೃತ್ಯನಂದನ ವಿದ್ಯಾಲಯ ಬೆಳ್ತಂಗಡಿ,ಗುರು ವಿದುಷಿ ಶ್ರೀಮತಿ ವಿದ್ಯಾ ಶೈಲೇಶ್ ಠೋಸರ್ ಇವರ ಶಿಷ್ಯರಿಂದ ನೃತ್ಯಾರ್ಪಣಂ. ದಿನಾಂಕ 23 ರಂದು ಓಂಕಾರ ಭಜನಾ ಮಂಡಳಿ ಮಿತ್ತಬಾಗಿಲು ಇವರಿಂದ ಭಜನಾ ಕಾರ್ಯಕ್ರಮ, ಶಿವದುರ್ಗಾ ಫ್ರೆಂಡ್ಸ್ ಚಂದ್ಕೂರು ಇವರಿಂದ ಹುಲಿವೇಷ, ದಿನಾಂಕ 24 ರಂದು ಚಂಡಿಕಾಹೋಮ ಮತ್ತು ಶ್ರೀಮತಿ ಶ್ರೀಜಾ ಕು ತುಳಸಿ, ಕು ಜ್ಯೋತಿ ಇವರಿಂದ ಸ್ಯಾಕ್ಸೋಫೋನ್ ನಾದನ ಜರುಗಲಿದೆ .

Related post

Leave a Reply

Your email address will not be published. Required fields are marked *

error: Content is protected !!