• October 16, 2024

ಆ.27 ರಂದು ಎಸ್ ಸಿಡಿಸಿಸಿ ಬ್ಯಾಂಕ್ (ಲಿ) ಬ್ಯಾಂಕಿನ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆ: ಸುದ್ದಿಗೋಷ್ಠಿ

 ಆ.27 ರಂದು ಎಸ್ ಸಿಡಿಸಿಸಿ ಬ್ಯಾಂಕ್ (ಲಿ) ಬ್ಯಾಂಕಿನ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆ: ಸುದ್ದಿಗೋಷ್ಠಿ

 

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಎಸ್ ಸಿಡಿಸಿಸಿ ಬ್ಯಾಂಕ್ LTD ಬ್ಯಾಂಕಿನ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆಯು 27 ಆದಿತ್ಯವಾರದಂದು ಬ್ಯಾಂಕಿನ ಸಭಾಭವನ ಬೆಳ್ತಂಗಡಿ ಯಲ್ಲಿ ಉದ್ಘಾಟನೆಗೊಳ್ಳುವುದಾಗಿ ಶಾಖಾ ನಿರ್ದೇಶಕರಾದ ನಿರಂಜನ್ ಜೈನ್ ತಿಳಿಸಿದರು.

ಅವರು ಬೆಳ್ತಂಗಡಿ S D C C ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

27 ಆದಿತ್ಯವಾರದಂದು ಜರುಗುವ ಕಾರ್ಯಕ್ರಮದಲ್ಲಿ ಎಟಿಎಂ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಹಕಾರ ರತ್ನ ಡಾ| ಎಂ ಎನ್ ರಾಜೇಂದ್ರಕುಮಾರ್ ವಹಿಸಲಿದ್ದು, ನೂತನ ಲಿಫ್ಟ್ ಉದ್ಘಾಟನೆಯನ್ನು ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಕೆ ಹರೀಶ್ ಕುಮಾರ್ ನಡೆಸಿಕೊಡಲಿದ್ದಾರೆ ಎಂದು ಹೇಳಿದರು

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಶಶಿಕುಮಾರ್ ಬಲ್ಯೊಟ್ಟು, ಬೆಳ್ತಂಗಡಿ ಮ್ಯಾನೇಜರ್ ಸುಧೀರ್ ಎಸ್ ಪಿ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!