ಕೇರಳ ಮೂಲಕ ಭಾರತಕ್ಕೆ ಬಂತು ಮಂಕಿಪಾಕ್ಸ್
ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಭಾರಿ ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್ ಕೇರಳದ ಮೂಲಕ ಭಾರತಕ್ಕೂ ಕಾಲಿಟ್ಟಿದೆ. ವಿದೇಶದಿಂದ ಕೇರಳಕ್ಕೆ ಬಂದ 35 ವರ್ಷದ ವ್ಯಕ್ತಿ ಒಬ್ಬನಲ್ಲಿ ಮಂಕಿ ಪಾಕ್ಸ್ ಗುರುವಾರ ದೃಢಪಟ್ಟಿದೆ.
ಈ ಹಿಂದೆ ದೇಶದ ಕೋವಿಡ್ ಮೊದಲ ಪ್ರಕರಣ ಕೂಡ ಕೇರಳದಲ್ಲಿ ಧೃಢಪಟ್ಟಿತ್ತು. ಈಗ ಮತ್ತೆ ದೇಶದ ಮೊದಲ ಮಂಕಿ ಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ ಎಂಬುವುದು ಗಮನಾರ್ಹ.
ಸೋಂಕಿತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಸೋಂಕಿತನ ನಿಕಟ ಸಂಪರ್ಕದಲ್ಲಿರುವವರ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇರಳ ಸರ್ಕಾರ ಹೇಳಿದೆ.