• July 16, 2024

ಶ್ರೀ ಧ. ಮಂ. ಆಂ. ಮಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯಕ್ತ ವಿಶೇಷ ಕಾರ್ಯಕ್ರಮ ತುಡಿತ ಭಾಗ -2

 ಶ್ರೀ ಧ. ಮಂ. ಆಂ. ಮಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯಕ್ತ ವಿಶೇಷ ಕಾರ್ಯಕ್ರಮ ತುಡಿತ ಭಾಗ -2


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯಕ್ತ ವಿಶೇಷ ಕಾರ್ಯಕ್ರಮ ತುಡಿತ ಭಾಗ -2ನ್ನು ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮಕ್ಕೆ ವೀರೂಶೆಟ್ಟಿಯವರು ಬಿಪಿ ಹಾಗು ಶುಗರ್ ಪರೀಕ್ಷೆಯ ಸಲಕರಣೆಗಳನ್ನು ತುಡಿತ ತಂಡಕ್ಕೆ ಹಸ್ತಾಂತರಿಸುವ ಮುಖಾಂತರ ಉದ್ಘಾಟಿಸಿದರು.

ತನು ಸ್ಪಂದಿಸಿದವರ ಮನ ಸ್ಪಂದಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಧರ್ಮಸ್ಥಳ, ಕಾಯಾರ್ತಡ್ಕ,ಕನ್ಯಾಡಿ.ನಾರ್ಯ ಹೀಗೆ ವಿವಿಧ ಕಡೆಗಳಲ್ಲಿನ ಹಾಸಿಗೆ ಬಿಟ್ಟು ಮೇಲೆ ಏಳಲಾಗದ ವ್ಯಕ್ತಿಗಳನ್ನು ಗುರುತಿಸಿ ವಿವಿಧ ತಂಡಗಳಾಗಿ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಹೆತ್ತವರು ಜೊತೆಗೂಡಿ ಅವರ ಮನೆಗಳಿಗೆ ಭೇಟಿ ಕೊಟ್ಟು ಹಾಡು ನೃತ್ಯ ಹರಟೆಗಳ ಮುಖಾಂತರ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಮನೆಮನೆಗೂ ತಲುಪಿಸಲಾಯಿತು.

ಈ ಸಂದರ್ಭದಲ್ಲಿ ಅವರಿಗೆ ಹಣ್ಣು ಹಂಪಲುಗಳನ್ನು ನೀಡಿ ತಮ್ಮ ಕೈಲಾದ ಧನಸಹಾಯವನ್ನು ಮಾಡಿ ಸಹಕರಿಸಿದರು. ಈ ಕಾರ್ಯಕ್ರಮಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳ್ತಂಗಡಿ ಇದರ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಹಲವಾರು ಪೋಷಕರುಗಳು ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರವನ್ನು ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!