• October 16, 2024

ಮಂಗಳೂರು ನಗರ ದ ಪುರಭವನದಲ್ಲಿ ಆಟಿಡೊಂಜಿ ದಿನ

 ಮಂಗಳೂರು ನಗರ ದ ಪುರಭವನದಲ್ಲಿ ಆಟಿಡೊಂಜಿ ದಿನ

 

ಮಂಗಳೂರು :ನಗರ ದ ಪುರಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ಆಮಂತ್ರಣ ಪರಿವಾರ… ಸಾರಥ್ಯದಲ್ಲಿ ಸೂಕ್ತ ನ್ಯೂಸ್ ಸಿದ್ದಕಟ್ಟೆ ಮತ್ತು ಕಲಾ ಪ್ರತಿಭೆಗಳು ಕಾರ್ಕಳ ಹಾಗೂ ಟೀಮ್ ಗಾನಯಾನ ಸಹಕಾರದಲ್ಲಿ ಆಟಿಡೊಂಜಿ ದಿನ… ಕಾರ್ಯಕ್ರಮ ಆ.13 ರಂದು ನಡೆಯಿತು.


ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೆರವೇರಿಸಿ ಶುಭ ಹಾರೈಸಿದರು. ಸಾಹಿತಿ,ನಟ-ನಿರ್ದೇಶಕರು,iನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕರ್ನಾಟಕ ಜಾನಪದ ಪರಿಷತ್ ದ ಕ. ಜಿಲ್ಲಾ ಘಟಕ ಅಧ್ಯಕ್ಷ ಪಮ್ಮಿ ಕೊಡಿಯಲ್ ಬೈಲ್, ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಸಾಹಿತಿ ಮಾಲತಿ ಶೆಟ್ಟಿ ಮಾಣೂರು, ವಕೀಲರು ಹಾಗೂ ಕರ್ನಾಟಕ ಜಾನಪದ ಪರಿಷತ್ ಮಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸ್ ರೈ, ರಾಗ ತರಂಗ ದ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಆಶಾ ಹೆಗ್ಡೆ, ನಾಯಕ ನಟ ಹಾಗೂ ಕೊರಿಯೋಗ್ರಾಫರ್ ಸೂರಜ್ ಸನಿಲ್,ಮಂಗಳೂರು ಬಾಯ್ ಜಾನ್ ಡಾನ್ಸ್ ಅಕಾಡೆಮಿಯ ನಿರ್ದೇಶಕರಾದ ಕಿಶೋರ್,ಬೆಳ್ತಂಗಡಿ ತಾಲೂಕು ಶಾಮಿಯಾನ ಸಂಘದ ಉಪಾಧ್ಯಕ್ಷ ಸುಕೇಶ್ ಜೈನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದ.ಕ.ಜಾ.ಪರಿಷತ್ ನ ರಾಜೇಶ್ ಸ್ಕೈಲಾರ್ಕ್ ,ಶಿವಪ್ರಸಾದ್ ಕೊಕ್ಕಡ, ಟಿಪೇಶ್ ಅಮೀನ್, ವಿಜಯ ಕುಮಾರ್ ಜೈನ್, ವಿಜಯಚಂದ್ರ ಮುಂಡ್ಲಿ ಇವರ ಉಪಸ್ಥಿತಿ ಯಲ್ಲಿ ಗ್ರಾಮೀಣ ಶೈಲಿಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಯಿತು ,ಈ ಸಂದರ್ಭದಲ್ಲಿ..ದೈವ ನರ್ತಕ-ಗಣೇಶ್ ಸಾಲ್ಯಾನ್ ಕೊನಿಮಾರ್ ರಿಗೆ ಹಾಗೂ ಅಂತಿಮ CA ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ ಗೊಂಡಿರುವ ಬೆಳ್ತಂಗಡಿ ತಾಲೂಕಿನ ಅಳದಂಗಡಿ ನಿರೀಕ್ಷಾ ನಾವರ ಇವರನ್ನು ಗೌರವ ಸನ್ಮಾನಮಾಡಲಾಯಿತು. ಇದಲ್ಲದೆ ವಿವಿಧ ಪ್ರತಿಭೆಗಳನ್ನು ರಂಗಕ್ಕೆ ಅರ್ಪಿಸುವಲ್ಲಿ ತನ್ನನ್ನು ತಾನೂ ಅರ್ಪಿಸಿಕೊಂಡ ಭವಿಷ್ಯದ ಮಕ್ಕಳಿಗೆ ಆಸರೆಯಾದ ಸುಮಾರು 100 ಕ್ಕಿಂತ ಹೆಚ್ಚು ಅಮ್ಮಂದಿರನ್ನು ಗೌರವಿಸಲಾಯಿತು.

ಪುಳಿಮುಂಚಿ ಚಿತ್ರ, Mr ಮದಿಯೆ ಚಿತ್ರಗಳ ಪ್ರಮೋಶನ್ ನಡೆಯಿತು. ಹಾಗೂ ಬೈ ಟೂ ಲವ್ ಚಿತ್ರದ ಪೋಸ್ಟರ್ ಬಿಡುಗಡೆ ಗೊಂಡಿತು ಅಲ್ಲದೆ
ಆಟಿ ಗ್ರಾಮೀಣ ಆಟಿಕೆ.ಗಳನ್ನು ನಡೆಯಿತು.

ಕಾರ್ಯಕ್ರಮದಲ್ಲಿ ನಗರ ಹಾಗೂ ಗ್ರಾಮೀಣ ಪ್ರತಿಭೆಗಳು ಭಾಗವಹಿಸಿದ್ದರು… ಆಟಿ ವಿಶೇಷತೆಯ.. ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮ ಕ್ಕೆ ಪ್ರಸಾದ್ ನಾಯಕ್, ಪ್ರಕಾಶ್ ಆಚಾರ್ಯ, ಧನರಾಜ್ ಆಚಾರ್ಯ, ಗುರುಪ್ರಸಾದ್ ಶೆಟ್ಟಿ, ಕಿಶೋರ್ ಮೂಡಬಿದ್ರೆ, ರಾಕೇಶ್ ಪೊಳಲಿ, ಜಿಡಿಕೆ ಕಂಚಿಕಾನ್, ರಂಜನ್ ನೆರಿಯ, ಮಧುಕರ ಆಚಾರ್ಯ ಕೊಟೇಶ್ವರ ಅಜಿತ್ ಪಂಚರತ್ನ ಸಹಕರಿಸಿದ್ದರು.

ಅನನ್ಯ ಭಟ್ ವೇಣೂರು ಪ್ರಾರ್ಥನೆ ಹಾಡಿದರು, ಅಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಸ್ವಾಗತಿಸಿದರು. ರಾಜೇಶ್ ಸ್ಕೈಲಾರ್ಕ್ ಧನ್ಯವಾದ ಸಲ್ಲಿಸಿದರು, ನಿತ್ಯಾ ಶೆಟ್ಟಿ ಪಕ್ಷಿಕೆರೆ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!