• December 8, 2024

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವತಿಯಿಂದ ಸ್ಥಾಪನೆ ದಿನಾಚರಣೆ

 ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ  ವತಿಯಿಂದ ಸ್ಥಾಪನೆ ದಿನಾಚರಣೆ

 

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಜುಲೈ.31 ರಂದು ಬೆಳ್ತಂಗಡಿ ಬಿಎಂಎಸ್ ಕಾರ್ಯಾಲಯದಲ್ಲಿ ಬಿಎಂಎಸ್ ಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಂಎಸ್ ತಾಲೂಕು ಸಮಿತಿಯ ಅಧ್ಯಕ್ಷರಾದ ಉದಯ್ ಬಿಕೆ ಬಂದಾರು ಇವರ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಸ್ಥಾಪನಾ ದಿನಾಚರಣೆಯ ಬಗ್ಗೆ ಬಿಎಂಎಸ್ ಜಿಲ್ಲೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಯು ಅವರು ಮಾತನಾಡಿ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕಾರ್ಮಿಕ ಬಂಧುಗಳು ಕೈಜೋಡಿಸಿ ಎಂದು ಮನವಿ ಮಾಡಿದರು.

ತಾಲೂಕು ಸೇವಾ ಪ್ರಮುಖವಾದ ವಿಜಯ್ ಅರಳಿ ಸ್ಥಾಪನೆ ದಿನಾಚರಣೆಯ ಶುಭಾಶಯ ಕೋರಿದರು. ತಾಲೂಕು ಸಂಯೋಜಕರಾದ ಶಾಂತಪ್ಪ ಇವರು ಕಾರ್ಯಕ್ರಮ ನಿರೂಪಿಸಿ , ಸ್ವಾಗತಿಸಿದರು. ಬಿಎಂಎಸ್‌ ಕಟ್ಟಡ ಕಾರ್ಮಿಕ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಕುಮಾರನಾಥ ಕಲ್ಮಂಜ ಧನ್ಯವಾದವಿತರು.

ಈ ಸಂದರ್ಭದಲ್ಲಿ ತಾಲೂಕು ಬೀಡಿ ಮಜ್ದೂರ್ ಸಂಘದ ಸಹ ಸಂಚಾಲಕರಾದ ಶಶಿಕಲಾ ಕೊಯ್ಯುರು ಅವರು, ತಾಲೂಕು ರಿಕ್ಷಾ ಯೂನಿಯನ್ ನ ಪ್ರಮುಖರು, ತಾಲೂಕಿನ ಬಿಎಂಎಸ್ ಪದಾಧಿಕಾರಿಗಳು,ಸದಸ್ಯರು ಮತ್ತು ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!