ಬೆಳ್ತಂಗಡಿ: ಕಾಂಗ್ರೆಸ್ ಪಕ್ಷಕ್ಕೂ ಸಮಾಜ ಘಾತುಕ ಶಕ್ತಿಗೂ ಸಂಬಂಧ ಇದ್ದ ಹಾಗಿದೆ, ಕಾಂಗ್ರೆಸ್ ಬಜೆಟ್ ನ್ಯಾಯ ಕೊಡಲಿಲ್ಲ ಅನ್ಯಾಯವೇ ತೋರಿಸುತ್ತದೆ : ಪ್ರತಾಪ್ ಸಿಂಹ ನಾಯಕ್
ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರ ರಾಜ್ಯದ ಯಾವುದೇ ಅಭಿವೃದ್ಧಿ ಗೆ ಒತ್ತುಕೊಡದೆ 5 ಗ್ಯಾರಂಟಿಗಳನ್ನು ಬಿಂಬಿಸಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ದೂರುವ ಬಜೆಟ್ ಆಗಿದೆ . ಗ್ಯಾರಂಟಿಯ ವಿಚಾರದ ಒಳಗೆಯೇ ಬಜೆಟ್ ಗಿರಕಿ ಹೊಡೆಯುತ್ತಿತ್ತು. ಬಜೆಟ್ ನ್ಯಾಯ ಕೊಡಲಿಲ್ಲ ಅನ್ಯಾಯವನ್ನೇ ತೋರಿಸುತ್ತದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಜುಲೈ.25 ರಂದು ಮಂಜುನಾಥೇಶ್ವರ ಕಲಾ ಭವನ ಬೆಳ್ತಂಗಡಿ ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೂ ಸಮಾಜ ಘಾತುಕ ಶಕ್ತಿಗೂ ಸಂಬಂಧ ಇದ್ದ ಹಾಗಿದೆ.ಸೌಜನ್ಯ ವಿಚಾರದಲ್ಲಿ ಜನರ ಭಾವನೆಯನ್ನು ಸರ್ಕಾರಕ್ಕೆ ಮುಟ್ಟುವ ವಿಚಾರ ಮಾಡಿದ್ದೇವೆ. ಮುಖ್ಯಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜ ಹಾಗೂ ನಾನು ಮನವಿಯನ್ನು ಸಲ್ಲಿಸಿದ್ದೇವೆ. ಸೌಜನ್ಯ ಅವರ ಪೋಷಕರಿಗೆ ನ್ಯಾಯದ ನಿಟ್ಟಿನಲ್ಲಿ ನಮ್ಮದು ಆಗ್ರಹವಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರದರ್ಶಿ ಧನಲಕ್ಷ್ಮೀ ಜನಾರ್ಧನ್, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.