ಬಂದಾರು : ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ ಕಾರ್ಯಕ್ರಮ:ಉಚಿತ ನೇತ್ರ ತಪಾಸಣಾ ಶಿಬಿರ
ಬಂದಾರು : ಗ್ರಾಮ ಪಂಚಾಯತ್ ಬಂದಾರು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ವಿಭಾಗ ) ಮಂಗಳೂರು ದ.ಕ, ಪ್ರಾಥಮಿಕ ಆರೋಗ್ಯ ಕೇಂದ್ರ ಕಣಿಯೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು-ಉಡುಪಿ -ಸುಳ್ಯ. ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು, ದ.ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ.) ಕಣಿಯೂರು ವಲಯ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ (ನಿ.) ಬಂದಾರು, ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ (ರಿ.) ಬಡಗನ್ನೂರು ಘಟಕ ಪುತ್ತೂರು ದ.ಕ, ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ (ನಿ.), ಶ್ರೀದೇವಿ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಬಂದಾರು,ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗ್ರಾ. ಪಂ.ಬಂದಾರು, ಮತ್ತು ಯಶಸ್ವೀ ನಾಗರಿಕರ ಸೇವಾ ಕೇಂದ್ರ ಸಂಘ ವಾಸುದೇವನಗರ ಕಾರ್ಕಳ (ರಿ.) ಉಡುಪಿ.
ಇದರ ಜಂಟಿ ಆಶ್ರಯದಲ್ಲಿ ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ ಕಾರ್ಯಕ್ರಮ ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 13 ನೇ ಸರಣಿ ಕಾರ್ಯಕ್ರಮ
ಬಂದಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜುಲೈ.16 ರಂದು ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ ಗೌಡ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ನೇತ್ರ ಸಮಸ್ಯೆ ಇರುವ ರೋಗಿಗಳು ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಈ ಕಾರ್ಯಕ್ರಮ ಸಂಯೋಜನೆ ಮಾಡಿದ ವಿವಿಧ ಸಂಘಟನೆಗಳಿಗೆ ಅಭಿನಂದನೆಗಳು ಸಲ್ಲಿಸಿ, ಶುಭಹಾರೈಸಿದರು.ಶಿಬಿರದ ನಿರ್ದೇಶಕರು, ಕಾರ್ಯಕ್ರಮದ ಸಂಯೋಜಕರು ಶ್ರೀ ಮುರಳಿಧರ ಭಟ್,ಮಂಗಳೂರು ಪ್ರಸಾದ್ ನೇತ್ರಾಲಯದ ಶ್ರೀ ನಿಶ್ಚಿತ್ ಶೆಟ್ಟಿ (ಪಿ.ಆರ್.ಓ) ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬoದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ, ಸದಸ್ಯರಾದ ದಿನೇಶ್ ಗೌಡ ಖಂಡಿಗ, ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀಮತಿ ಪುಷ್ಪಾವತಿ ಬಂದಾರು,ಶ್ರೀಮತಿ ವಿಮಲ ತಾರಿದಡಿ , ಶ್ರೀಮತಿ ಅನಿತಾ ಕುರುಡoಗೆ,ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ,ಪ್ರಸಾದ್ ನೇತ್ರಾಲಯ ಮಂಗಳೂರು ಇದರ ವೈದ್ಯಾಧಿಕಾರಿ ಡಾ|ಅಹನಾ ಫಾತಿಮಾ ಮತ್ತು ತಂಡ, ಬಂದಾರು ಉಪಕೇಂದ್ರದ ಸಿ.ಎಚ್.ಓ ಜಗದೀಶ್,
ಕಣಿಯೂರು ವಲಯ ಮೇಲ್ವಿಚಾರಕರಾದ ಶಿವಾನಂದ್ ಬಂದಾರು ಸೇವಾಪ್ರತಿನಿಧಿ ನಿರಂಜನ್ ಗೌಡ, ಮೊಗ್ರು ಸೇವಾಪ್ರತಿನಿಧಿ ಶ್ರೀಮತಿ ಸರೋಜಿನಿ ಉಪಸ್ಥಿತರಿದ್ದರು,
ಬಂದಾರು, ಮೊಗ್ರು ಗ್ರಾಮದ ಆಶಾಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ಗ್ರಂಥಾಲಯ ಸಿಬ್ಬಂದಿ ಸಹಕರಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ನೇತ್ರ ಸಮಸ್ಯೆ ಇರುವ ರೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಅಮೃತ ಆರೋಗ್ಯ ತಪಾಸಣೆಯನ್ನು ಕೂಡ ನಡೆಸಲಾಯಿತು.