ಬೆಳ್ತಂಗಡಿ(ನ.19) : ಆಭರಣ ಜುವೆಲ್ಲರ್ಸ್ ನ ಪ್ರಿಮಾಯ್ಸಸ್ ನಲ್ಲಿ ಯೋಗೀಶ್ ಆರ್ ಬಿಢೆ ತನ್ನ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಜೊತೆಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ.10,000 ಮೊತ್ತವನ್ನು ನೀಡಿ ತನ್ನ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಸೇವಾಭಾರತಿ ಸಂಸ್ಥೆಯ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ಇದನ್ನು ಸ್ವೀಕರಿಸಿ ಸಂಸ್ಥೆಯ ಪರವಾಗಿ ಶುಭಹಾರೈಸಿ, ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಧರ್ಮಪತ್ನಿ ರಶ್ಮಿ ಯೋಗೀಶ್ ಬಿಢೆ, ದಕ್ಷಿಣ ಕನ್ನಡ […]Read More
ಬೆಳ್ತಂಗಡಿ ಪಟ್ಟಣ ಪಂಚಾಯತಿನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಶಾಸಕ ಹರೀಶ್ ಪೂಂಜ ಹಾಗೂ ಪ.ಪಂ ಅಧ್ಯಕ್ಷ ಜಯಾನಂದ ಗೌಡ ಮತ್ತು ಇತರರು ಅಭಿನಂದಿಸಿದರುRead More
ರಾಷ್ಟ್ರೀಯ ತುಳು ಗುಡಿಗಾರರ ಸಂಘ(ರಿ) ದಕ್ಷಿಣ ಕನ್ನಡ ಜಿಲ್ಲೆ- ಉಡುಪಿ ಜಿಲ್ಲೆ ಕಟ್ಟದ ಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮವು ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ವಿನಲ್ಲಿ ನ.17 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಅಧ್ಯಕ್ಷರು ರವೀಂದ್ರ ಗುಡಿಗಾರ್ ವಹಿಸಿದ್ದರು. ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಂಡಿತು.ಮುಖ್ಯಾತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, […]Read More
ವೇಣೂರು: ಸ್ವಚ್ಛತಾ ಅಭಿಯಾನ: ಮೂಡುಕೋಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ
ವೇಣೂರು : ವೇಣೂರು ಗ್ರಾಮಪಂಚಾಯತ್ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ನ 17 ರಂದು ಮೂಡುಕೋಡಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಹಕಾರದೊಂದಿಗೆ ರಸ್ತೆ ಬದಿ ಬೆಳೆದಿರುವ ಗಿಡ ಪೊದರು ಕತ್ತರಿಸುವ ಕಾರ್ಯ ನಡೆಯಿತು. ಮುಂದಿನ ದಿನದಲ್ಲಿ ಹುಲ್ಲು ಕತ್ತರಿಸುವ ಯಂತ್ರ ಬಳಸಿ ಎಲ್ಲ ರಸ್ತೆ ಬದಿ ಹುಲ್ಲನ್ನು ಕತ್ತರಿಸುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆದಿದ್ದು ಇದರ ನೇತೃತ್ವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಮೇಲ್ವಿಚಾರಕಿ ಶಾಲಿನಿ ಯವರು, ಒಕ್ಕೂಟದ […]Read More
ಬೆಳ್ತಂಗಡಿ ತಾಲೂಕು, ಕನ್ಯಾಡಿ- || ಶ್ರೀರಾಮ ನಿಲಯದ ಶ್ರೀಮತಿ ವಸಂತಿ ಮತ್ತು ಶ್ರೀ ರಾಮಣ್ಣ ಗುಡಿಗಾರರ ಮಗಳ ಶುಭವಿವಾಹದ ಆರತಕ್ಷತೆಯ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ. 25,000 ಮೊತ್ತವನ್ನು ನೀಡಿ ಶುಭಹಾರೈಸಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ. ನವ ವಧುವರರಿಗೆ ಶುಭಹಾರೈಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಟ್ರಸ್ಟಿ ಶ್ರೀ […]Read More
ಚಾರ್ಮಾಡಿ : ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿ ಇಂದು ಮುಂಜಾನೆ 7.00 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ.ಹೊಸಮಠ ಕಡೆಗೆ ತೆರಲಿರುವ ಬಗ್ಗೆ ವರದಿಯಾಗಿದೆ. ಯಾವುದೇ ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಪದೇ ಪದೇ ಆನೆಯ ದಾಳಿಯಾಗುತ್ತಲೆ ಇದೆ ಆ ಭಾಗದ ಜನರು ಭಯಭೀತಗೊಂಡಿದ್ದಾರೆ ಈ ಬಗ್ಗೆ ಅರಣ್ಯ ಇಲಾಖೆ, ಸರ್ಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಆ ಭಾಗದ ನೊಂದ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.Read More
ಡಿಸೆಂಬರ್ 13 ರಂದು ಬಿಡುಗಡೆ ಗೊಳ್ಳಲಿರುವ ದಸ್ಕತ್ ಸಿನೆಮಾವು ಈ ವರ್ಷದ ಸಾಲಿನ ಕೊನೆಯ ಸಿನೆಮಾ.ಹಲವಾರು ವಿಶೇಷತೆಗಳಿಂದ ಕೂಡಿರುವ ಈ ಚಿತ್ರ ತಂಡವು ನವೆಂಬರ್ 18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ.ತುಳು ಚಲನಚಿತ್ರ ರಂಗದಲ್ಲಿ ಹೊಸತನದ ಅಲೆಯನ್ನ ಸೃಷ್ಟಿ ಮಾಡಿ ಆ ಮುಖೇನ ಪ್ರೇಕ್ಷಕರ ಮನ ಗೆಲ್ಲುವ ತವಕದಲ್ಲಿರುವ ತಂಡ, ತುಳುನಾಡಿನ ಮಣ್ಣಿನ ಸೊಗಡಿನೊಂದಿಗೆ, ಕೇಪುಲ ಪಲ್ಕೆಯ ಕಥೆಯನ್ನ ನಮಗೆ ಊಣಬಡಿಸಿ ನಮ್ಮೆಲ್ಲರ ಮನಸ್ಸಲ್ಲಿ ಸಹಿ ಹಾಕಲು ದಸ್ಕತ್ ತಂಡದವರು ತಯಾರಾಗಿದ್ದಾರೆ. […]Read More
ಮನ್ ಶರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನ ಆಚರಣೆದಯಾ
ಬೆಳ್ತಂಗಡಿ; ಸಯ್ಯಿದ್ ಉಮರ್ ಅಸ್ಸಖಾಫ್ ತಂಗಳ್ ನೇತೃತ್ವದ ಗೇರುಕಟ್ಟೆಯ ಮನಶರ್ ವಿದ್ಯಾ ಸಂಸ್ಥೆಯ ವತಿಯಿಂದ ಲಾಯಿಲ ವಿಮುಕ್ತಿ ದಯಾ ವಿಶೇಷ ಚೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳ್ತಂಗಡಿಯ “ದಯಾ ವಿಶೇಷ ಶಾಲೆ” ಗೆ ಭೇಟಿ ನೀಡಿ ಅಲ್ಲಿಯ ವಿಶೇಷ ಚೇತನ ಮಕ್ಕಳೊಂದಿಗೆ ಸಂಪೂರ್ಣವಾಗಿ ಬೆರೆತು ಹೊಸ ಅನುಭವ ಪ್ರಾಪ್ತಿಸಿಕೊಳ್ಳಲಾಯಿತು. ಬೆಳ್ತಂಗಡಿ ಆಸುಪಾಸಿನ 100 ರಿಂದ 150 ಕ್ಕೂ ಹೆಚ್ಚು ವಿಕಲ ಚೇತನ ವಿದ್ಯಾರ್ಥಿಗಳಿಗೆ […]Read More
ಬೆಳ್ತಂಗಡಿ – ಕಾರ್ತಿಕ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ದೀಪವನ್ನು ಬೆಳಗಿಸಿ ಹಿಂದೂಗಳು ಈ ವರ್ಷವೂ ದೀಪೋತ್ಸವ ಆಚರಿಸಿದರು. ದೇಶಾದ್ಯಂತ ದೇವಸ್ಥಾನಗಳಲ್ಲಿ ಸಾಲುದೀಪಗಳನ್ನು ಬೆಳಗಿಸಲಾಯಿತು. ಈ ವರ್ಷದ ದೀಪೋತ್ಸವದ ವಿಶೇಷತೆ ಎಂದರೆ ಹಿಂದೂ ರಾಷ್ಟ್ರದ ಸಂಕಲ್ಪದ ಉದ್ದೇಶದಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಈ ಉಪಕ್ರಮದ ಮೂಲಕ ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ ಜನಜಾಗೃತಿ ಮೂಡಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಟ್ರಮೆ, ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ […]Read More
ಬೆಳ್ತಂಗಡಿ: ದ. ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ರ ಪುರಸ್ಕಾರದ ದಯಾ ವಿಶೇಷ ಶಾಲೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಬೆಳ್ತಂಗಡಿಯ ಮುಳಿಯ ಜುವೆಲ್ಲರ್ಸ್ ರವರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ದಯಾ ವಿಶೇಷ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.2) ಶ್ರೀ ಜಯಾನಂದ ಲೈಲಾ ಕಳೆದ 34ವರ್ಷಗಳಿಂದ ನಿರಂತರವಾಗಿ ಗೃಹರಕ್ಷಕ ದಳದಲ್ಲಿ ಹಳ ಸುದೀರ್ಘ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ನಿರಂತರ ತೊಡಗಿಸಿಕೊಂಡ ತೊಡಗಿಸಿಕೊಂಡ ಸಾಧನೆಗಾಗಿ 3)ಶ್ರೀ ಬೆಳಾಲು ಲಕ್ಷ್ಮಣ ಗೌಡಸ್ವ ಆಸಕ್ತಿಯಿಂದ ಕಿರಿಯ […]Read More