• July 25, 2024
ಜಿಲ್ಲೆ

ಜುಲೈ 8 ಮತ್ತು 9 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ‌ಶಾಲಾ ಕಾಲೇಜುಗಳಿಗೆ ಜು.8 ಮತ್ತು ಜು.9 ರಂದು ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.Read More

ಕ್ರೈಂ

ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿತ: ಮೂವರು ಕಾರ್ಮಿಕರ ಸಾವು

ಬಂಟ್ವಾಳ: ಕಾರ್ಮಿಕರು ವಾಸವಾಗಿದ್ದ ಮನೆಯ ಮೇಲೆ ಗುಡ್ಡವೊಂದು ಕುಸಿದು, ಶೆಡ್ ನೊಳಗೆ ಸಿಲುಕಿಕೊಂಡು ನಾಲ್ವರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜು ಪಾಲಕ್ಕಾಡ್, ಸಂತೋಷ್ ಆಲಕ್ಕುಯ್ಯ, ಬಾಬು ಕೊಟ್ಟಾಯಂ ಮೃತ ಕಾರ್ಮಿಕರಾಗಿದ್ದು ಜಾನಿ ಕಣ್ಣೂರು ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು.Read More

ಸ್ಥಳೀಯ

ಉಪ್ಪಿನಂಗಡಿಯಲ್ಲಿ ನೆರೆ ಭೀತಿ

ಉಪ್ಪಿನಂಗಡಿ: ಕುಮಾರಧಾರ- ನೇತ್ರಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿಯಲ್ಲಿ ನೆರೆ ಎದುರಾಗಿದೆ. ಎರಡೂ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಲ್ಲಿಯ ಜನರಲ್ಲಿ ಆತಂಕ ಮೂಡಿದೆ. ಸಹಸ್ರಲಿಂಗೇಶ್ವರ ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ನೆನ್ನೆ ಸಂಜೆ ವೇಳೆಗೆ 6 ಮೆಟ್ಟಿಲುಗಳಷ್ಟೆ ಕಾಣುತ್ತಿದ್ದವು, ಪುತ್ತೂರು ತಹಶೀಲ್ದಾರ್ ಉಪ್ಪಿನಂಗಡಿಗೆ ಆಗಮಿಸಿ ಗೃಹರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್ ಬೋಟ್ ನಲ್ಲಿ ಸಂಚರಿಸಿ ಬೋಟ್ ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದ್ದಾರೆ.Read More

ಸ್ಥಳೀಯ

ಬೆಳಾಲು: ಅಕ್ರಮ ಮರ ಸಾಗಾಟ: ಮರ ಹಾಗೂ ಲಾರಿ ಅಧಿಕಾರಿಗಳ ವಶ

ಬೆಳಾಲು: ಬೆಳಾಲಿನಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕ ಕಣಿಯೂರು ಎಂಬಲ್ಲಿ ರಿಕ್ಷಾ ಚಾಲಕರಿಗೆ ದಾರಿ ಬಿಡದೇ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದು ಈ ವೇಳೆ ಅನುಮಾನ ಬಂದ ಕಾರಣ ಸ್ಥಳೀಯರು ಲಾರಿಯನ್ನು ತಡೆಹಿಡಿದಿದ್ದ ಘಟನೆ ನಡೆದಿದೆ. ಬಳಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಲಾರಿ ಹಾಗೂ ಮರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Read More

ಜಿಲ್ಲೆ ಸ್ಥಳೀಯ

ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯದಂತೆ ಎಚ್ಚರಿಕೆ ನೀಡಬೇಕೆಂದು ರಾ.ಸೇ.ಸಂ ರಿಂದ ಪೊಲೀಸರಿಗೆ

ಪುಂಜಾಲಕಟ್ಟೆ: ಮುಂಬರುವ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋ ಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕು ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರಾಮ್ ಸೇನಾ ಸಂಘಟಕರು ಮನವಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ಸೇನಾ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯೋಗಿಶ್ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್ ಹಾಗೂ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದರು.Read More

ದೇಶ ಸ್ಥಳೀಯ

ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ನಾಮ ನಿರ್ದೇಶನ ಮಾಡಿದ

ಧರ್ಮಸ್ಥಳ: ರಾಜ್ಯ ಸಭಾ ಸದಸ್ಯರಾಗಿ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ನು ನಾಮನಿರ್ದೇಶನ ಮಾಡಲಾಗಿದೆ. ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿ ಪಿಟಿ ಉಷಾ, ಇಳಯರಾಜ, ವೀರೇಂದ್ರ ಹೆಗ್ಗಡೆ, ಕೆವಿ ವಿಜಯೇಂದ್ರ ಪ್ರಸಾದ್, ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕು ನಾಮನಿರ್ದೇಶಿತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದು, ಅವರ ಕೊಡುಗೆಗಳಿಗೆ ರಾಷ್ಟ್ರೀಯ ಮತ್ತು ಜಾಗತೀಕ ಮನ್ನಣೆಯನ್ನು ಪಡೆದಿದ್ದಾರೆ.Read More

ಜಿಲ್ಲೆ

ದ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನಲೆ ನಾಳೆಯೂ(ಜು.7)ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಬೆಳ್ತಂಗಡಿ: ದ.ಕ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಜು.7 ರಂದು ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಎಲ್ಲಾ ಶಾಲಾ- ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.Read More

ಜಿಲ್ಲೆ

ಬಕ್ರೀದ್ ಹಬ್ಬದಂದು ಗೋ ಹತ್ಯೆ ಪ್ರಕರಣವನ್ನು ನಿಷೇಧಿಸುವಂತೆ ರಾ.ಸೇ.ಸ ಇಂದ ಪೊಲೀಸ್ ಆಯುಕ್ತರಿಗೆ

ಮುಂಬರುವ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋ ಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕಾಗಿ ಬಜಪೆ ಪೊಲೀಸ್ ಆಯುಕ್ತರಲ್ಲಿ ರಾಮ್ ಸೇನಾ ಸಂಘಟನೆಯಿಂದ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಮ್ ಸೇನಾ ಮಂಗಳೂರು ತಾಲೂಕಿನ ಅಧ್ಯಕ್ಷ ಚಂದ್ರಶೇಖರ್ ಸುಂಕದಕಟ್ಟೆ, ಉಪಾಧ್ಯಕ್ಷ ಸುಧೀರ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಪ್ಪೆಪದವು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖ್ ರಾದ ಸಂಪ್ರೀತ್ ಎಕ್ಕಾರ್ ಉಪಸ್ಥಿತರಿದ್ದರು.Read More

ದೇಶ

ಕನ್ಹಯ್ಯಲಾಲ್ ಹತ್ಯೆಯನ್ನು ಖಂಡಿಸಿ ಆರೋಪಿಗಳನ್ನು ನೇಣಿಗೇರಿಸುವಂತೆ ರಾಮ್ ಸೇನಾ ಗೋಕಾಕ್ ಸಂಘಟನೆಯಿಂದ ಪ್ರತಿಭಟನೆ

ಬೆಳ್ತಂಗಡಿ: ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಅಮಾಯಕ ಹಿಂದೂ ಕನ್ಹಯ್ಯಲಾಲ್ ಎಂಬ ಟೈಲರನನ್ನು ಭಯೋತ್ಪಾದಕರು ಶಿರಚ್ಛೇದ ಮಾಡಿ ಇಸ್ಲಾಮಿನ ಹೆಸರಿನಲ್ಲಿ ಹತ್ಯೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರ ಮಾಡಿದ ಜಿಹಾದಿ ಮತಾಂಧರ ಈ ಹತ್ಯೆಯ ಕೃತ್ಯವನ್ನು ಖಂಡಿಸಿ, ಆರೋಪಿಗಳನ್ನು ಕೂಡಲೆ ನೇಣಿಗೇರಿಸಬೇಕೆಂದು ಆಗ್ರಹಿಸಿ ರಾಮ್ ಸೇನಾ ಕರ್ನಾಟಕದ ಗೋಕಾಕ್ ಸಂಘಟನೆ ವತಿಯಿಂದ ಸಂತೋಷ್ ಚಂದನವಾಲೆ ಹಾಗೂ ಸಂತೋಷ್ ಸಾಳುಂಕೆ ಅವರ ನೇತೃತ್ವದಲ್ಲಿ ತಾಲೂಕು ಕಚೇರಿಯ ಮುಂಭಾಗ ಜು.5 ರಂದು ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು. ಈ […]Read More

error: Content is protected !!